ಬೀದರ್: ತಾಲೂಕಿನ ಮನ್ನಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪಿಕೆಪಿಎಸ್) ಅಧ್ಯಕ್ಷರಾಗಿ ಯುವ ಮುಖಂಡ ದೀಪಕ್ ಮನ್ನಳ್ಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗ್ರಾಪಂನಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ದೀಪಕ್ ಅವರು ಮಾತ್ರ ನಾಮಪತ್ರ ಸಲ್ಲಿಸಿದ ಕಾರಣ ಅವಿರೋಧ ಆಯ್ಕೆ ಚುನಾವಣಾಧಿಕಾರಿ ಮಲ್ಲಿನಾಥ ಸ್ವಾಮಿ ಘೋಷಣೆ ಮಾಡಿದರು.
ದೀಪಕ್ ಅವರು ಮಾಜಿ ಶಾಸಕ ದಿ.ನಾರಾಯಣರಾವ್ ಮನ್ನಳ್ಳಿ ಅವರ ಹಿರಿಯ ಪುತ್ರರಿದ್ದು, ಬಿಜೆಪಿ ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ.