ಜಿಲ್ಲೆ

‘ಮನ್ ಕೀ ಬಾತ್’ನಲ್ಲಿ ಹುಲಿಗಳ ನಾಡಿನ ಹೆಜ್ಜೆ ಗುರುತು..!

ಚಾಮರಾಜನಗರ: ಪ್ರಧಾನ ಮಂತ್ರಿ ನರೇಂದ್ರಮೋದಿ ಅವರ ಮನದ ಮಾತಿನಲ್ಲಿ ಹುಲಿಗಳ ನಾಡು ಚಾಮರಾಜನಗರ ಜಿಲ್ಲೆ ಪದೇ ಪದೇ ಗುರುತಿಸಲ್ಪಟ್ಟು ಪ್ರಸ್ತಾಪವಾಗುತ್ತಿದೆ.

2014ರ ಅ.3ರಂದು ಶುರುವಾದ ಪಿಎಂ ಮೋದಿ ಅವರ ಜನಪ್ರಿಯ ಮಾಸಿಕ ಬಾನುಲಿ ‘ಮನ್ ಕೀ ಬಾತ್’ ಕಾರ್ಯಕ್ರಮ ಪ್ರಸ್ತುತ 119ನೇ ಸಂಚಿಕೆ ತಲುಪಿದೆ. ಮನ್ ಕೀ ಬಾತ್‌ನಲ್ಲೂ ದೇಶದಲ್ಲಿ ಅಪರೂಪದ ಸಾಧನೆ ಮಾಡಿದ, ವಿಶೇಷ ವಿಚಾರಗಳ ಬಗ್ಗೆ ಪಿಎಂ ಮೋದಿ ಮಾತನಾಡಿ ಗಮನ ಸೆಳೆಯುತ್ತಿದ್ದಾರೆ. ಇವುಗಳಲ್ಲಿ ಮೂರು ಬಾರಿ ಕರ್ನಾಟಕದ ಗಡಿಜಿಲ್ಲೆ ಚಾಮರಾಜನಗರದ ಸಾಧಕರು ಮತ್ತು ವಿಶೇಷತೆಯ ಬಗ್ಗೆ ಮನದ ಮಾತನಾಡಿರುವುದು ವಿಶೇಷ.

98ನೇ ಮನ್ ಕಿ ಬಾನ್‌ನಲ್ಲಿ ದೇಶದ ಜನರನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಕೊಳ್ಳೇಗಾಲ ತಾಲೂಕಿನ ಬಾಳಗುಣಸೆ ಮಂಜುನಾಥ್ ಅವರ ಲಾಲಿ ಹಾಡಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಬಾಳಗುಣಸೆ ಮಂಜುನಾಥ್ ರಚನೆ ಮಾಡಿದ್ದ ‘ಮಲಗು ಕಂದ ಮಲಗು ಕೂಸೆ’..ಎಂಬ ಲಾಲಿ ಹಾಡು ಏಕತಾ ದಿನದ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಜೋಗುಳ ಗೀತೆ ರಚನೆ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗಳಿಸಿ ಬಹುಮಾನ ಪಡೆದಿತ್ತು. ಇದರ ಬಗ್ಗೆ ಸ್ವತಃ ಮೋದಿ ಅವರೇ ಮಾತನಾಡಿ, ‘ಈ ಹಾಡನ್ನು ಕೇಳಿದರೆ ನಿಮಗೂ ಖುಷಿಯಾಗಲಿದೆ’ ಎಂದು ಹೇಳಿದ್ದರು.

107ನೇ ಮನ್ ಕೀ ಬಾತ್‌ನಲ್ಲಿ ಪ್ರಧಾನಿ ಮೋದಿ, ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮದ ವರ್ಷಾ ಅವರ ಹೆಸರನ್ನು ಪ್ರಸ್ತಾಪಿಸಿದ್ದರು. ಮನ್ ಕೀ ಬಾತ್ ಕಾರ್ಯಕ್ರಮದ ಪ್ರೇರಣೆಯಿಂದ ವರ್ಷಾ ಸ್ವಂತ ಉದ್ಯಮ ಆರಂಭಿಸಿದ್ದರು. ಬಾಳೆ ದಿಂಡಿನಿಂದ ಕರಕುಶಲ ವಸ್ತುಗಳನ್ನು ತಯಾರಿಸುತ್ತಿದ್ದರು. ನಂತರದ ದಿನಗಳಲ್ಲಿ ಬಾಳೆ ದಿಂಡಿನ ಸಿಪ್ಪೆಯಿಂದ ಜೈವಿಕ ಗೊಬ್ಬರ ತಯಾರಿಕೆ ಮಾಡಿದ್ದರು. ಇದನ್ನು ಪಿಎಂ ಮೋದಿ ಗುರುತಿಸಿ ಮನ್ ಕೀ ಬಾತ್‌ನಲ್ಲಿ ಪ್ರಸ್ತಾಪಿಸಿ ಪ್ರಶಂಸೆ ವ್ಯಕ್ತಪಡಿಸಿದ್ದರು.

ಭಾನುವಾರ ನಡೆದ (ೆ.23) 119ನೇ ಮನ್ ಕೀ ಬಾತ್‌ನಲ್ಲಿ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನಾಥ ಸ್ವಾಮಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಕುರಿತು ಮಾತನಾಡಿ, ಹಲವು ಪ್ರದೇಶಗಳಲ್ಲಿ ಇಂದಿಗೂ ಪ್ರಾಣಿ ಮತ್ತು ಮಾನವ ಸಂಘರ್ಷಗಳು ನಡೆಯುತ್ತಿರುತ್ತದೆ. ಆದರೆ ಅತಿ ಹೆಚ್ಚು ಹುಲಿಗಳಿರುವ ಪ್ರದೇಶವಾಗಿರುವ ಚಾಮರಾಜನಗರ ಬಿಆರ್‌ಟಿ ಅರಣ್ಯ ಪ್ರದೇಶದಲ್ಲಿ ಹುಲಿಗಳನ್ನು ಉಳಿಸುವುದರಲ್ಲಿ ಸ್ಥಳೀಯ ಸೋಲಿಗರ ಪಾತ್ರ ಮಹತ್ವದ್ದಾಗಿದೆ ಎಂದು ಬಣ್ಣಿಸಿದ್ದಾರೆ. ಈಗಲೂ ಮಾನವ-ಪ್ರಾಣಿ ಸಂಘರ್ಷ ನಡೆಯುತ್ತಲೇ ಇರುತ್ತದೆ. ಆದರೂ ಅದನ್ನು ಕಾಪಾಡಿಕೊಂಡು ಹೋಗಲಾಗುತ್ತಿದೆ ಎಂದರೆ ಅದಕ್ಕೆ ಸೋಲಿಗರೆ ಕಾರಣರಾಗಿದ್ದಾರೆ ಎಂದು ಪ್ರಧಾನಿ ಮೋದಿ ಮೆಚ್ಚುಗೆಯ ಮಾತುಗಳನ್ನು ಹೇಳಿದ್ದಾರೆ.

ಮನದ ಮಾತಷ್ಟೇ ಅಲ್ಲ...

ಪ್ರಧಾನ ಮಂತ್ರಿ ನರೇಂದ್ರಮೋದಿ ಜಿಲ್ಲೆಯ ವಿಶೇಷತೆಗಳನ್ನು ಮನ್ ಕೀ ಬಾತ್‌ನಲ್ಲಷ್ಟೇ ಅಲ್ಲ ಪ್ರತ್ಯೇಕವಾಗಿಯೂ ಗುರುತಿಸಿ ಶ್ಲಾಸಿದ್ದಾರೆ.

2023ರ ೆ.13ರ ಬೆಳಗ್ಗೆ 8 ಗಂಟೆಯಲ್ಲಿ ಬಂಡೀಪುರ ಹುಲಿ ಯೋಜನೆಯ ಓಂಕಾರ್ ವಲಯದ ಕಾಡಂಚಿನ ನಾಗಾಪಟ್ಟಣ ಗ್ರಾಮದ ಬಳಿ ಜಮೀನೊಂದರಲ್ಲಿ 40 ವರ್ಷದ ಹೆಣ್ಣಾನೆ ಅಕ್ರಮ ವಿದ್ಯುತ್ ತಂತಿಬೇಲಿ ಸ್ಪರ್ಶಕ್ಕೆ ನಿತ್ರಾಣಗೊಂಡಿತ್ತು. ಇದಕ್ಕೆ ಸತತ 6 ಗಂಟೆಗಳ ಕಾಲ ಚಿಕಿತ್ಸೆ ನೀಡಿ ಜೀವ ಉಳಿಸಿದ್ದ ಅರಣ್ಯ ಇಲಾಖೆ ಸಿಬ್ಬಂದಿಯ ಕಾರ್ಯಾಚರಣೆಯನ್ನು ಕೇಂದ್ರ ಪರಿಸರ ಹಾಗೂ ಅರಣ್ಯ ಖಾತೆ ಸಚಿವ ಭೂಪೇಂದ್ರ ಯಾದವ್ ವಿಡಿಯೋ ಸಮೇತ ಟ್ವೀಟ್ ಮಾಡಿದ್ದರು. ಇದನ್ನು ಪ್ರಧಾನ ಮಂತ್ರಿ ನರೇಂದ್ರಮೋದಿ ಸಹ ರೀ ಟ್ವೀಟ್ ಮಾಡಿ ‘ಇದನ್ನು ನೋಡಿ ಸಂತೋಷವಾಯಿತು. ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಸಿಬ್ಬಂದಿಗೆ ಅಭಿನಂದನೆಗಳು. ನಮ್ಮ ಜನರಲ್ಲಿ ಇಂತಹ ಸಹಾನುಭೂತಿ ಶ್ಲಾಘನೀಯ’ ಎಂದಿದ್ದರು.

ಬಂಡೀಪುರದಲ್ಲಿ ನಮೋ ಸಾರಿ... ಹುಲಿ ಯೋಜನೆಯ ಸುವರ್ಣ ಸಂಭ್ರಮದಲ್ಲಿದ್ದ ಬಂಡೀಪುರಕ್ಕೆ 2023ರ ಏ.9ಂದು ಪ್ರಧಾನ ಮಂತ್ರಿ ನರೇಂದ್ರಮೋದಿ ಭೇಟಿ ನೀಡಿದ್ದರು. ಬಂಡೀಪುರ ಕ್ಯಾಂಪಸ್‌ನಲ್ಲಿ ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಗೌರವ ಸಲ್ಲಿಸಿದ್ದರು. ಅರಣ್ಯದಲ್ಲಿ ಸಾರಿ ಮಾಡಿ ಪ್ರಕೃತಿಯ ಸೌಂದರ್ಯ ಸವಿದಿದ್ದರು.

ಅಸಂಖ್ಯಾತ ಪ್ರತಿಭಾವಂತರು ಎಲೆಮರೆಕಾಯಿಯಂತೆ ಇದ್ದಾರೆ. ಪ್ರಧಾನ ಮಂತ್ರಿ ನರೇಂದ್ರಮೋದಿ ಅವರು ಇಂತವರನ್ನು ಸೂಕ್ಷ್ಮವಾಗಿ ಗುರುತಿಸುತ್ತಿದ್ದಾರೆ. ಇದು ದೇಶದ ಹೆಮ್ಮೆ. ಬಾಳಗುಣಸೆ ಮಂಜುನಾಥ್, ಮನ್ ಕೀ ಬಾತ್‌ನಲ್ಲಿ ಮೆಚ್ಚುಗೆ ಪಡೆದಿದ್ದ ಕವಿ ಸಣ್ಣದಾಗಿ ಶುರು ಮಾಡಿದ ಬಾಳೆ ದಿಂಡಿನಿಂದ ಕರಕುಶಲ ವಸ್ತು ತಯಾರಿಸುವ ಉದ್ಯಮ ಊರಿನಲ್ಲಿ ಅಕ್ಕ-ಪಕ್ಕದವರಿಗೂ ಗೊತ್ತಿರಲಿಲ್ಲ. ಆದರೆ ಪಿಎಂ ಮೋದಿ ಮನ್ ಕೀ ಬಾತ್‌ನಲ್ಲಿ ಗುರುತಿಸಿದ ಬಳಿಕ ದೇಶಕ್ಕೆ ಪರಿಚಿತವಾಯಿತು. ಇದರಿಂದ ಸ್ಫೂರ್ತಿ ಪಡೆದು ಉದ್ಯಮವನ್ನು ಮುನ್ನಡೆಯುತ್ತಿದ್ದೇನೆ. ಪ್ರಾರಂಭದಲ್ಲಿ 3 ಜನ ಕೆಲಸಗಾರರಿದ್ದ ಉದ್ಯಮದಲ್ಲಿ ಈಗ 10 ಜನರು ದುಡಿಯುವಂತಾಗಿದೆ. ವರ್ಷಾ, ಮನ್ ಕೀ ಬಾತ್‌ನಲ್ಲಿ ಗುರುತಿಸಲ್ಪಟ್ಟ ಉದ್ಯಮಿ