ಹೊಳೆಹೊನ್ನೂರು: ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಕೇವಲ ಒಂದು ಕಾರ್ಯಕ್ರಮವಲ್ಲ. ಬದಲಾಗಿ ದೇಶದ ಎಲ್ಲ ಸಂಗತಿಗಳ ಮೇಲೆ ಬೆಳಕು ಮೂಡಿಸುವ ಮಹತ್ವದ ಕಾರ್ಯವಾಗಿದೆ ಎಂದು ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯ್ಕ ಹೇಳಿದರು. ಅರಹತೊಳಲು ಗ್ರಾಮದಲ್ಲಿ ಆಯೋಜಿದ್ದ ಮೋದಿ ಅವರ ಮನ್ ಕೀ ಬಾತ್ ವೀಕ್ಷ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದ ಮೂಲೆ ಮೂಲೆಗಳಲ್ಲಿ ನಡೆಯುವ ವಿದ್ಯಮಾನಗಳು, ಕರಕುಶಲ ಕೈಗಾರಿಕೆಗಳು, ವಿಶೇಷ ಸಂಗತಿಗಳನ್ನು ಗುರುತಿಸಿ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಉಲ್ಲೇಖಿಸಲಾಗುತ್ತದೆ. ಆ ಮೂಲಕ ಸ್ವದೇಶಿ ಉತ್ಪನ್ನಗಳ ತಯಾರಿಗೆಗೆ ಉತ್ತೇಜನ ದೊರಕುವಂತೆ ಮಾಡುವುದು ಇದರ ಉದ್ದೇಶ. ಹಾಗೆಯೇ ಜನರ ಸಮಸ್ಯೆಗಳನ್ನು ಅರಿತು, ಅವುಗಳಿಗೆ ಸೂಕ್ತವಾದ ಪರಿಹಾರ ಒದಗಿಸುವಲ್ಲಿ ಸಹಕಾರಿಯಾಗುತ್ತದೆ ಎಂದರು. ಮಂಡಲ ಅಧ್ಯಕ್ಷ ಮಲ್ಲೇಶಪ್ಪ, ಜಿಲ್ಲಾ ಬಿಜೆಪಿ ಮುಖಂಡ ರಾಜೇಶ್ ಪಟೇಲ್, ಸುಬ್ರಮಣಿ, ಕೆ.ಪಿ.ಕಿರಣ್ ಕುಮಾರ್, ಎ.ಎಂ.ಹಾಲೇಶಪ್ಪ, ಎ.ಕೆ.ರಮೇಶ್, ಎ.ಬಿ.ಮಲ್ಲೇಶಪ್ಪ, ಎ.ಆರ್.ಬಸವರಾಜ್, ಶಂಕರ್, ಚಂದನ್, ಯೋಗೇಶ್ವರ್, ರಂಗಪ್ಪ, ಕಿರಣ್, ಸಿ.ಪಿ.ಚಂದ್ರಶೇಖರ್, ನಾಗರಾಜ್, ಎ.ಬಿ.ಪ್ರಕಾಶ್, ಎ.ಎಂ.ರಾಜಶೇಖರ್, ಗಿರೀಶ್, ರಾಘವೇಂದ್ರ ಇತರರಿದ್ದರು.