ಜಿಲ್ಲೆ

ಮನೆಯೊಳಗೆ ನುಗ್ಗಿ ಮೂವರು ಮಕ್ಕಳನ್ನು ಕಚ್ಚಿದ ನಾಯಿ

ಖಾನಾಪುರ: ತಾಲೂಕಿನ ಬೀಡಿ ಗ್ರಾಮದಲ್ಲಿ ಹುಚ್ಚು ನಾಯಿಯೊಂದು ಮನೆಯೊಳಗೆ ನುಗ್ಗಿ ಮೂವರು ಮಕ್ಕಳನ್ನು ಕಚ್ಚಿ ಗಾಯಗೊಳಿಸಿದ ಟನೆ ಗುರುವಾರ ನಡೆದಿದೆ.

ಬೀಡಿ ಗ್ರಾಮದ ಆರಾಧ್ಯ ಕಾಳಿ (10), ನಿಧಾ ಶಮಶೇದ್​(10) ಮತ್ತು ಲಕ್ಷಿ$್ಮ ಕಾಳಿ ಅವರಿಗೆ ನಾಯಿ ಕಚ್ಚಿ ಗಂಭೀರ ಗಾಯಗೊಳಿಸಿದೆ. ನಾಯಿ ದಾಳಿಯಲ್ಲಿ ಆರಾಧ್ಯಳ ಕಿವಿ ತುಂಡರಿಸಿದ್ದು, ಹೊಟ್ಟೆಯ ಭಾಗಕ್ಕೂ ಅನೇಕ ಗಾಯಗಳಾಗಿವೆ. ಈ ಟನೆಯಿಂದ ರೊಚ್ಚಿಗೆದ್ದ ಸಾರ್ವಜನಿಕರು ನಾಯಿಯನ್ನು ಕೊಂದು ಹಾಕಿದ್ದಾರೆ. ಇತ್ತೀಚೆಗೆ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಅವುಗಳನ್ನು ನಿಯಂತ್ರಿಸುವಂತೆ ಗ್ರಾಪಂಗೆ ಒತ್ತಾಯಿಸಿದ್ದಾರೆ. ಗಾಯಗೊಂಡ ಬಾಲಕಿಯರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.