ಜಿಲ್ಲೆ

ಮನೆಯಿಂದ ಹೋದವ ಶವವಾಗಿ ಪತ್ತೆ

ತಿಪಟೂರು: ತಾಲೂಕಿನ ಹೊನ್ನವಳ್ಳಿ ಹೋಬಳಿ ಗುಡಿಗೊಂಡನಹಳ್ಳಿ ನಿವಾಸಿ ಬಸವರಾಜು (40) ಮಂಗಳವಾರ ಬೆಳಗಿನ ಜಾವ ಮನೆಯಿಂದ ಹೊರ ಹೋದವರು ಸಂಜೆ ಶವವಾಗಿ ಪತ್ತೆಯಾಗಿದ್ದಾರೆ. ಮೃತನಿಗೆ ಪತ್ನಿ, ಇಬ್ಬರು ಮಕ್ಕಳು ಇದ್ದಾರೆ. ಬಸವರಾಜು ಕುರಿ ಕಾಯುವ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದ್ದು, ಈತನ ದೇಹದ ಮೇಲೆ ಗಾಯದ ಗುರುತು ಹಾಗೂ ಅಲ್ಲಲ್ಲಿ ಚರ್ಮ ಕಿತ್ತು ಬಂದಿದ್ದು, ಬಸವರಾಜು ದೇಹ ಗಮನಿಸಿದ ಕುಟುಂಬ ಸದಸ್ಯರು ಮತ್ತು ಗ್ರಾಮಸ್ಥರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.ಹೊನ್ನವಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೈಲಿಗೆ ಸಿಕ್ಕಿ ವ್ಯಕ್ತಿ ಸಾವು

ತಿಪಟೂರು: ನಗರದ ಮಾರನಗೆರೆ ಬಡಾವನೆ ಸಮೀಪದ ರೈಲ್ವೆ ಟ್ರಾಕ್​ ಬಳಿ ಮಂಗಳವಾರ ರಾತ್ರಿ ವ್ಯಕ್ತಿಯೋರ್ವ ರೈಲಿಗೆ ಸಿಕ್ಕಿ ಮೃತಪಟ್ಟಿದ್ದಾನೆ. ಮಾರನಗೆರೆ ನಿವಾಸಿ ಗಾರೆ ಕೆಲಸದ ನರಸಿಂಹಮೂರ್ತಿ (30)ಮೃತ. ಅರಸೀಕೆರೆ ರೈಲ್ವೆ ಠಾಣೆ ಪೊಲೀಸರು ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.