ಜಿಲ್ಲೆ

ಮನೆಯಿಂದ ಮತದಾನ ಪೂರ್ಣ

ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿ 8 ವಿಧಾನ ಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ 13ರಿಂದ 16 ವರೆಗೆ ಜರುಗಿದ ಮನೆಯಿಂದ ಮತದಾನ ಕಾರ್ಯ ಪೂರ್ಣಗೊಂಡಿದೆ. 85 ವರ್ಷ ವಯಸ್ಸು ಮೀರಿದ 2601ಹಿರಿಯ ನಾಗರಿಕರು ಮತ್ತು 1475 ಅಂಗವಿಕಲರು ಸೇರಿ 3536 ಜನರು ಮನೆ ಯಿಂದಲೇ ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ.
ವಿವರ
ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 137 ಹಿರಿಯ ನಾಗರಿಕರು ಮತ್ತು 55 ಅಂಗವಿಕಲರು,ಹಿರಿಯೂರು 191-122,ಮೊಳಕಾಲ್ಮೂರು 84-81,ಚಳ್ಳಕೆರೆ 200-254,ಹೊಳಲ್ಕೆರೆ 184-55,ಹೊಸದುರ್ಗ 167-117,ಪಾವಗಡ 472-202 ಹಾಗೂ ಶಿರಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿ 1065 ಹಿರಿಯ ನಾಗರಿಕರು ಮತ್ತು 589 ಅಂಗವಿಕಲರು ಮತ ಚಲಾಯಿಸಿದ್ದಾರೆ.