ಜಿಲ್ಲೆ

ಮನೆಯಿಂದ ಮತ 2,198 ಚಲಾವಣೆ

ಚಿತ್ರದುರ್ಗ: ಇಲ್ಲಿನ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 85 ವರ್ಷ ಮೇಲ್ಪಟ್ಟ 1,409 ಹಿರಿಯ ನಾಗರಿಕರು, 789 ಅಂಗವಿಕಲರು ಸೇರಿ ಒಟ್ಟು 2,198 ಮತದಾರರು ಮನೆಯಿಂದಲೇ ಮತ ಚಲಾಯಿಸಿದರು.

ಕೇಂದ್ರ ಚುನಾವಣಾ ಆಯೋಗ ಮನೆಯಿಂದಲೇ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ಕ್ಷೇತ್ರಾದ್ಯಂತ ಪ್ರಕ್ರಿಯೆ ಆರಂಭವಾಗಿದ್ದು, ಮೊದಲ ದಿನವೇ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ವಿವರ: ಹಿರಿಯ ನಾಗರಿಕರು, ಅಂಗವಿಕಲರು ಕ್ರಮವಾಗಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ 132, 51, ಹಿರಿಯೂರು-91-64, ಮೊಳಕಾಲ್ಮೂರು-84-81, ಚಳ್ಳಕೆರೆ-190-189, ಹೊಳಲ್ಕೆರೆ-144-42, ಹೊಸದುರ್ಗ-162-65, ಪಾವಗಡ-147-72, ಸಿರಾ-459-225 ಮಂದಿ ಮತ ಚಲಾಯಿಸಿದ್ದಾರೆ.