ಜಿಲ್ಲೆ

ಮನೆಯಲ್ಲೇ ಫೀಜಿಯೋಥೆರಪಿಗೆ ಸಿಇಒ ಸೂಚನೆ

ಡಿ.ಪಿ.ನಾಗರಾಜ ಶ್ರೇಷ್ಠಿ

ಚಿತ್ರದುರ್ಗ: ದೈಹಿಕ ನ್ಯೂನತೆ,ಇತರೆ ಕಾರಣಗಳಿಂದ ಗೃಹ ಆಧಾರಿತ ಶಿಕ್ಷಣ ಪಡೆಯುತ್ತಿರುವ ವಿಶೇಷ ಮಕ್ಕಳಿಗೆ ಅವರ ಮನೆಯಲ್ಲೇ ಫೀಜಿಯೋಥೆರಪಿ ಚಿ ಕಿತ್ಸೆ ನೀಡುವಂತೆ ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಅಧಿಕಾರಿಗಳಿಗೆ ಸೂಚಿಸಿದರು.
ಗುರುವಾರ ನಗರದ ಹಲವು ಬಡಾವಣೆಗಳ ಗೃಹ ಆಧಾರಿತ ಶಿಕ್ಷಣ ಕೇಂದ್ರಗಳಿಗೆ ಭೇಟಿ ನೀಡಿದ ಅವರು,ಶಾಲೆಗೆ ಹಾಜರಾಗಲು ಸಾಧ್ಯವಾಗ ದ ತೀವ್ರ ದೈಹಿಕ ನ್ಯೂನ್ಯತೆಯುಳ್ಳ ಮಕ್ಕಳಿಗೆ, ಮನೆಯಲ್ಲೇ ತಮಗೆ ದೈನಂದಿನ ಕೌಶಲ ತರಬೇತಿ ಹಾಗೂ ಫೀ ಜಿಯೋಥೆರಪಿ ಸೇವೆ ಒದಗಿಸುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರ ಬೇಕು.
ಇಂತಹ ಮಕ್ಕಳಿಗೆ ಆಧಾರ್,ಯುಡಿಐಡಿ ಕಾರ್ಡ್ ನೀಡಬೇಕು. ಮಾಸಾಶನ ಸೌಲಭ್ಯ ಒದಗಿಸುವುದರೊಂದಿಗೆ ಶಿಕ್ಷಣ,ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಅಂಗವಿಕಲರ ಕಲ್ಯಾಣ,ಆರೋಗ್ಯ ಇಲಾಖೆಗಳು ತಿಂ ಗಳಲ್ಲಿ ಒಂದು ದಿನ ಈ ಮಕ್ಕಳಿಗೆ ಸೌಲಭ್ಯಗಳನ್ನು ಒದಗಿಸ ಬೇಕೆಂದು ನಿರ್ದೇ ಶಿಸಿದರು. ಚಿತ್ರದುರ್ಗ ತಾಲೂಕಲ್ಲಿ 34 ಮಕ್ಕಳ ಗೃಹಾಧಾರಿತ ಶಿಕ್ಷಣ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಇಲ್ಲಿ ಮಕ್ಕಳ ಬೆಳವಣಿಗೆ ಹಾಗೂ ಆರೋಗ್ಯ ಕುರಿತಾದ ಸಂಪೂರ್ಣ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಸೆರೆಬ್ರಲ್‌ಪಾಲ್ಸಿಯಿಂದ ಬಳಲುತ್ತಿರುವ ಮಗುವಿನ ಮನೆಗೆ ಭೇಟಿ ನೀಡಿದ ಸಿಇಒ,ಮಗುವನ್ನು ಪರೀಕ್ಷಿಸಿ ಜಿಲ್ಲಾಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆ ನೀಡು ವಂತೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಅವರಿಗೆ ಸೂಚಿಸಿದರು. ಅಜ್ಜಿ ಆಶ್ರಯದಲ್ಲಿ ಬೆಳುತ್ತಿರುವ ಮಗುವಿಗೆ ಇಲಾಖೆ ಹಾಗೂ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಒದಗಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಉಪನಿರ್ದೇಶಕಿ ಭಾರತಿ ಬಣಕಾರ್ ಅವರಿಗೆ ತಿಳಿಸಿದರು. ಸಮನ್ವಯ ಶಿಕ್ಷಣ ಸಂಪನ್ಮೂಲ ಕೇಂದ್ರಕ್ಕೆ ಭೇಟಿ ನೀಡಿದರು. ಜಿಪಂ ಉಪಕಾರ್ಯದರ್ಶಿ ಕೆ.ತಿಮ್ಮಪ್ಪ, ಡಿಎಚ್‌ಒ ಡಾ. ಜಿ.ಪಿ. ರೇಣುಪ್ರಸಾದ್,ಡಿಡಿಪಿಐ ಎಂ.ಆರ್.ಮಂಜುನಾಥ,ಬಿಇಒ ಎಸ್.ನಾಗಭೂಷಣ್,ವೆಂಕಟೇಶ್ ಮತ್ತಿತರರು ಇದ್ದರು.