ಕಲಬುರಗಿ: ನಗರದ ಅರಾತ್ ಕಾಲನಿಯಲ್ಲಿ ಬಾಗಿಲ ಕೀಲಿ ಮುರಿದು, ಮನೆಯಲ್ಲಿದ್ದ ೧೦ ಲಕ್ಷ ರೂ. ಮತ್ತು ಚಿನ್ನಾಭರಣ ಕಳ್ಳತನ ಮಾಡಲಾಗಿದೆ. ಬೀದರ್ ಜಿಲ್ಲೆ ಮಂಗಲಗಿ ಗ್ರಾಮದ ನನ್ನೆಸಾಬ್ ಬೇರೂಪಿ ನಗರದ ಅರಾತ್ ಕಾಲನಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಖಾಸಗಿ ಕಂಪನಿಯೊಂದರಲ್ಲಿ ಸೆಲ್ಸ್ ಮ್ಯಾನೇಜರ್ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಚಳ್ಳಿಕೇರಿಯಲ್ಲಿನ ತಮ್ಮ ಪ್ಲಾಟ್ ಮಾರಿದ್ದ ೧೦ ಲಕ್ಷ ರೂ. ಬಾಡಿಗೆ ಮನೆಯಲ್ಲಿಟ್ಟಿದ್ದರು. ಸಂಬಂಧಿಕರ ಕರ‍್ಯಕ್ರಮಕ್ಕೆ ಬೇರೆ ಊರಿಗೆ ಹೋದಾಗ ಕಳ್ಳತನವಾಗಿದೆ. ಮನೆಯ ಪೆಟ್ಟಿಯಲ್ಲಿಟ್ಟಿದ್ದ ೧೦ ಲಕ್ಷ ರೂ. ನಗದು, ಬಂಗಾರದ ಖಲಸೇರಿ, ಬೆಳ್ಳಿ ಚೈನ್, ಸುತ್ತುಂಗುರ, ಸೇರಿ ಒಟ್ಟು ೧೦.೮೧ ಮೌಲ್ಯದ ನಗದು, ಚಿನ್ನಾಭರಣ ಕಳ್ಳತನವಾಗಿದೆ ಎಂದು ನೀಡಿದ ದೂರಿನಂತೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.