ಮದ್ದೂರು: ಪಟ್ಟಣದ ರಾಮ್‌ರಹಿಮ್ ನಗರದಲ್ಲಿ ಪರವಾನಗಿ ಇಲ್ಲದೆ ಮನೆಯಲ್ಲಿಟ್ಟಿದ್ದ ಮಾರಾಕಾಸ್ತ್ರಗಳನ್ನು ವಶಕ್ಕೆ ಪಡೆದಿರುವ ಪಟ್ಟಣ ಠಾಣೆ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ.
ಲೇ. ಜಲಿಲ ಎಂಬುವರ ಪುತ್ರ ಮಕ್ಬಲ್ (60) ಬಂಧಿತ ವ್ಯಕ್ತಿ. ಈತನಿಂದ 1 ಮಚ್ಚು, 3 ಲಾಂಗ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಕ್ಬಲ್ ಹಲವು ದಿನಗಳಿಂದ ಮನೆ ಮುಂಭಾಗ ಮಾರಾಕಾಸ್ತ್ರಗಳನ್ನು ಇಟ್ಟು ಪ್ರದರ್ಶನ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಿಪಿಐ ಸಂತೋಷ್ ನೇತೃತ್ವದಲ್ಲಿ ಪೊಲೀಸರು ದಾಳಿ ಮಾಡಿ ಮಾರಾಕಾಸ್ತ್ರಗಳ ಸಮೇತ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.