ಹಾಸನ: ಮನೆಯ ಹಿಂಬಾಗಿಲ ಬೀಗ ಮುರಿದು ನಗದು ಹಣ ಹಾಗೂ 23 ಗ್ರಾಂ ತೂಕದ ಚಿನ್ನಾಭರಣ ಕಳವು ಮಾಡರುವ ಘಟನೆ ಜು.1ರಂದು ನಡೆದಿದೆ
ತಾಲೂಕಿನ ಗೊರೂರಿನ ಎಚ್.ಆರ್.ಪಿ ವಸತಿ ಗೃಹದ ಅಣ್ಣಾಜಿ ಎಂಬುವರ ಜು.1ರಂದು ಮಗಳ ಮನೆಗೆ ತೆರಳಿದರು. ಮನೆಯಲ್ಲಿ ಯಾರು ಇಲ್ಲದೇ ಇದ್ದಾಗ ಕಳ್ಳರು ಬೀರುವಿನಲ್ಲಿಟ್ಟಿದ್ದ 25 ಸಾವಿರ ನಗದು, 20 ಗ್ರಾಂ.ತೂಕದ ಚಿನ್ನದ ನೆಕ್ಲೇಸ್. 3 ಗ್ರಾಂ ತೂಕದ ಚಿನ್ನದ ಓಲೆ ಹಾಗೂ ದೇವರ ಮುಂದಿನ ಗೋಲಕದಲ್ಲಿದ್ದ 5 ರಿಂದ 6 ಸಾವಿರ ಹಣವನ್ನು ಕಳ್ಳರು ದೋಚಿಕೊಂಡು ಹೋಗಿದ್ದಾರೆ. ಚಿನ್ನದ ಆಭರಣ ಹಾಗೂ ನಗದು ಹಣದ ಒಟ್ಟು ಮೊತ್ತ 1.25 ಲಕ್ಷ ಎಂದು ಅಂದಾಜಿಸಲಾಗಿದ್ದು, ಗೊರೂರು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.