ಜಿಲ್ಲೆ

ಮನೆಯಲ್ಲಿ ಹಣ-ಚಿನ್ನ ಕಳವು

Hassan - Mohan Kanthur

ಹಾಸನ: ಮನೆಯ ಬೀಗ ಒಡೆದು ಚಿನ್ನಾಭರಣ ಮತ್ತು ನಗದು ಹಣ ಕಳವು ಮಾಡಿರುವ ಘಟನೆ ನಗರದ ಹೊರ ವಲಯದ ದೇವೇಗೌಡ ನಗರದಲ್ಲಿ ನಡೆದಿದೆ.
ಆ.9 ರಂದು ಬೆಳಗ್ಗೆ ನಗರದ ವಾಸಿ ಸುರೇಶ್ ಎಂಬುವರು ಪತ್ನಿಗೆ ಆರೋಗ್ಯ ಸರಿಇಲ್ಲದ ಕಾರಣ, ಮನೆಗೆ ಬೀಗ ಹಾಕಿಕೊಂಡು ವೈದ್ಯರಿಗೆ ತೋರಿಸಲು ಹಾಸನ ಟೌನ್‌ಗೆ ತೆರಳಿದ್ದರು. ಮಧ್ಯಾಹ್ನ 12.30 ಗಂಟೆ ಸಮಯದಲ್ಲಿ ವಾಪಸ್ ಮನೆಗೆ ಹೋಗಿ ನೋಡಲಾಗಿ ಮನೆಯ ಮುಂ ಬಾಗಿಲಿನ ಬೀಗವನ್ನು ಕಳ್ಳರು ಒಡೆದು ಮನೆಯೊಳಗೆ ಪ್ರವೇಶಿಸಿ ಬೀರುವಿನಲ್ಲಿದ್ದ 6 ಗ್ರಾಂ.ತೂಕದ ಉಂಗುರ ಮತ್ತು 6 ಗ್ರಾಂ ತೂಕದ 3 ಜೊತೆ ಚಿನ್ನದ ಓಲೆ ಹಾಗೂ 1 ಲಕ್ಷ ನಗದು ಹಣ ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.