ಜಿಲ್ಲೆ

ಮನೆಯಲ್ಲಿ ವಿದೇಶಿ ಕರೆನ್ಸಿ, ಚಿನ್ನಾಭರಣ ಕದ್ದ ಕಳ್ಳರು

ಮೈಸೂರು: ಬೋಗಾದಿಯಲ್ಲಿ ಮನೆಯ ಡೋರ್ ಲಾಕ್ ಮುರಿದು ಒಳನುಗ್ಗಿರುವ ಖದೀಮರು ವಿದೇಶಿ ಕರೆನ್ಸಿ, 40 ಸಾವಿರ ರೂ. ನಗದು, 90 ಗ್ರಾಂ ಚಿನ್ನಾಭರಣ ಹಾಗೂ 2.5 ಕೆಜಿ ಬೆಳ್ಳಿಯನ್ನು ದೋಚಿದ್ದಾರೆ.

ದೀಪಾವಳಿ ಹಬ್ಬದ ನಿಮಿತ್ತ ಮನೆ ಮಾಲೀಕ ಪರಮೇಶ್ ಅವರು ಕುಟುಂಬ ಸಹಿತ ಬಿಳಿಗೆರೆ ಗ್ರಾಮಕ್ಕೆ ತೆರಳಿದ್ದರು. ಈ ಸಂದರ್ಭವನ್ನು ಬಳಸಿಕೊಂಡ ಕಳ್ಳರು ಮನೆ ಡೋರ್ ಲಾಕ್ ಮುರಿದು ಕೈಚಳಕ ತೋರಿಸಿ ಪರಾರಿಯಾಗಿದ್ದಾರೆ.

ಪರಮೇಶ್ ಶನಿವಾರ ಹಿಂದಿರುಗಿದಾಗ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಸರಸ್ವತಿಪುರಂ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.