ಹಾಸನ: ನಗರದ ದೇವಮ್ಮ ಬಡಾವಣೆಯಲ್ಲಿ ಭಾನುವಾರ ರಾತ್ರಿ ಮನೆಯ ಡೋರ್ ಲಾಕ್ ಮುರಿದು ಬೀರುವಿನಲ್ಲಿಟ್ಟಿದ್ದ 77 ಸಾವಿರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ.
ಬಡಾವಣೆಯ ಬಾಡಿಗೆ ಮನೆಯೊಂದರಲ್ಲಿ ವಾಸವಿರುವ ಕಟ್ಟಾಯ ಹೋಬಳಿ ಸೀಗೂರು ಗ್ರಾಮದ ಎಂ.ಆರ್.ಮೇಘನಾ ಎಂಬುವರಿಗೆ ಸೇರಿದ ಚಿನ್ನಾಭರಣ ಕಳುವಾಗಿದೆ. ಮೇಘನಾ ಅವರ ಪತಿ ವಾಹನ ಚಾಲಕರಾಗಿದ್ದು, ಭಾನುವಾರ ಶಬರಿಮಲೆಗೆ ತೆರಳಿದ್ದರಿಂದ ಅವರೂ ಸಹ ಮನೆಗೆ ಬೀಗ ಹಾಕಿಕೊಂಡು ತವರು ಮನೆಗೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಕಳ್ಳರು ಕಬ್ಬಿಣದ ರಾಡ್‌ನಿಂದ ಮನೆಯ ಲಾಕ್ ಮೀಟಿ ಒಡೆದು ಒಳಗೆ ನುಗ್ಗಿ, ಬೀರುವಿನಲ್ಲಿಟಿದ್ದ 77 ಸಾವಿರ ರೂ. ಬೆಲೆ ಬಾಳು 10 ಗ್ರಾಂ ತೂಕದ ಚಿನ್ನದ ಓಲೆ ಹ್ಯಾಂಗಿಗ್ಸ್, 5 ಗ್ರಾಂ ಚಿನ್ನದ ಜುಮುಕಿ, 3 ಗ್ರಾಂ ಚಿನ್ನದ ಉಂಗುರ, ಹಾಗೂ 5 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ. ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.