ಜಿಲ್ಲೆ

ಮನೆಯಲ್ಲಿ ಚಿನ್ನ, ನಗದು ಕಳವು

ಚಾಮರಾಜನಗರ : ನಗರದ ಗಾಳೀಪುರ ಬಡಾವಣೆಯ ಮನೆಯೊಂದರಲ್ಲಿ ಚಿನ್ನ ಮತ್ತು ನಗದನ್ನು ಖದೀಮರು ದೋಚಿದ್ದಾರೆ.

ಗಾಳೀಪುರ ಬಡಾವಣೆಯ ನಿವಾಸಿ ಅಸ್ಗರ್ ಖಾನ್ ಅವರ ಪುತ್ರಿಯಾದ ಆಫ್ರೀನ್ ತಾಜ್ ಎಂಬುವರ ಮನೆಗೆ ಬುಧವಾರ ರಾತ್ರಿ ಕಳ್ಳ ಕನ್ನ ಹಾಕಿದ್ದು, ಸುಮಾರು 27 ಗ್ರಾಂ ಚಿನ್ನ, ಬೆಳ್ಳಿ ಹಾಗೂ 25 ಸಾವಿರ ರೂ.ನಗದನ್ನು ಕಳ್ಳತನ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಡಿವೈಎಸ್ಪಿ ಲಕ್ಷ್ಮಯ್ಯ ಹಾಗೂ ಪಟ್ಟಣ ಠಾಣೆಯ ಪೊಲೀಸರು ಆಗಮಿಸಿ ಬೆರಳಚ್ಚು ತಜ್ಞರು ಹಾಗೂ ಪೊಲೀಸ್ ಇಲಾಖೆಯ ಶ್ವಾನದಳದೊಂದಿಗೆ ಪರಿಶೀಲನೆ ನಡೆಸಿದರು. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.