ಚನ್ನರಾಯಪಟ್ಟಣ : ಮನೆಯ ಬಾಗಿಲಿನ ಬೀಗ ಒಡೆದು ಬೀರುವಿನಲ್ಲಿಟ್ಟಿದ್ದ ನಗದು ಹಾಗು ಚಿನ್ನಾಭರಣಗಳ ಕಳವು ಮಾಡಿರುವ ಘಟನೆ ಭಾನುವಾರ ತಾಲೂಕಿನ ಕೊತ್ತನಘಟ್ಟ ಗ್ರಾಮದಲ್ಲಿ ನಡೆದಿದೆ.
ಪ್ರಕಾಶ ಎಂಬುವರ ತಂದೆ-ತಾಯಿ ಇಬ್ಬರೂ ಬೆಂಗಳೂರಿನಲ್ಲಿರುವ ತಮ್ಮ ಅತ್ತೆಯನ್ನು ನೋಡಿಕೊಂಡು ಬರಲು ಮನೆಗೆ ಬೀಗ ಹಾಕಿಕೊಂಡು ಹೋಗಿದ್ದರು.ಸೋಮವಾರ ಬೆಳಿಗ್ಗೆ ತಂದೆ-ತಾಯಿ ವಾಸವಿದ್ದ ಮನೆಯ ಬೀಗವನ್ನು ಕಳ್ಳರು ರಾತ್ರಿಯ ಸಮಯದಲ್ಲಿ ಬೀಗ ಒಡೆದು ಒಳ ನುಗ್ಗಿ, ಬೀರುವಿನಲ್ಲಿದ್ದ 45 ಸಾವಿರರೂ. ನಗದು ಹಾಗು 3 ರಿಂದ 4 ಗ್ರಾಂ ತೂಕವುಳ್ಳ 3 ಉಂಗುರಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ಶ್ರವಣಬೆಳಗೊಳ ಪೊಲೀಶ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.