ಜಿಲ್ಲೆ

ಮನೆಯ ಬೀಗ ಮುರಿದು ಹಾಡು ಹಗಲಿನಲ್ಲಿಯೇ ಕಳ್ಳತನ

ಮನೆಯ ಬೀಗ ಮುರಿದು ಹಾಡು ಹಗಲಿನಲ್ಲಿಯೇ ಕಳ್ಳತನ
ಬೆಳಗಾವಿ: ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯ ಬಾಗಿಲು ಮುರಿದು ಮನೆಯಲಿದ್ದ ಚಿನ್ನ,ಬೆಳ್ಳಿಯ ವಸ್ತುಗಳನ್ನು ಕಳ್ಳತನ ಮಾಡಿರುವ ಘಟನೆ ನಗರದ ಗಣೇಶಪುರದಲ್ಲಿ ಶುಕ್ರವಾರ ಮಧ್ಯಾನ್ಹ ನಡೆದಿದೆ.
ಗಣೇಶಪುರದ ಕ್ರಾಂತಿ ನಗರದ ನಿವಾಸಿ ಸುಜಾತಾ ರಾಜು ಹೊನಗೇಕರ ಎಂಬುವವರು ತಮ್ಮ ಮಕ್ಕಳನ್ನು ಶಾಲೆಯಿಂದ ಕರೆತರಲು ಹೋಗಿದ್ದ ವೇಳೆ ಮನೆಯ ಬಾಗಿಲು ಮುರಿದು ಕಳ್ಳತನ ಮಾಡಲಾಗಿದೆ‌.ಮನೆಯ ಟ್ರೇಜರಿಯ ಲಾಕರ್ ನಲ್ಲಿಟ್ಟಿದ್ದ ಚಿನ್ನದ ಮಾಂಗಲ್ಯ,ಬೆಳ್ಳಿಯ ಚೈನು,ಬೆಳ್ಳಿಯ ನಾಣ್ಯಗಳು ಸೇರಿ ಒಟ್ಟು 10 ಗ್ರಾಂ ಚಿನ್ನ,15 ಗ್ರಾಂ ಬೆಳ್ಳಿಯ ಆಭರಣ.ಹಾಗೂ 80 ಗ್ರಾಂ ಬೆಳ್ಳಿಯ ನಾಣ್ಯಗಳು ಸೇರಿ ಒಟ್ಟು 89,200 ರೂ.ಮೌಲ್ಯದ ಚಿನ್ನಾಭರಣ ದರೋಡೆ ಮಾಡಲಾಗಿದೆ,ಈ ಕುರಿತು ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.