ಜಿಲ್ಲೆ

ಮನೆಯ ಗೋಡೆ ಕುಸಿದು ವ್ಯಕ್ತಿ ಸಾವು; ಹುಟ್ಟಿದ ಮಗುವಿನೊಂದಿಗೆ ಇರಲು ಬಿಡದ ಜವರಾಯ


ಹಾವೇರಿ: ಮನೆಯ ಗೋಡೆ ಕುಸಿದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕುನ್ನೂರ ಗ್ರಾಮದ ಪ್ಲಾಟ್‌ನಲ್ಲಿ ನಡೆದಿದೆ.
ಮುಸ್ತಾಕ ಶರೀಫ್‌ಸಾಬ ಯರಗುಪ್ಪಿ (27) ಮೃತ ದುರ್ದೈವಿ.
ನಿರಂತರ ಮಳೆಯಿಂದ ಮನೆಯ ಗೋಡೆ ಕುಸಿದು ಬಿದ್ದಿದೆ. ಇದರಿಂದ ತೀವ್ರವಾಗಿ ಗಾಯಗೊಂಡ ಮುಸ್ತಾಕನನ್ನು ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ. ಮನೆಯು ತೀವ್ರ ಶಿಥಿಲಗೊಂಡಿದ್ದರಿಂದ ಗೋಡೆಯು ಕುಸಿತಗೊಂಡಿದೆ. ಮುಸ್ತಾಕ್‌ನ ಪತ್ನಿಗೆ ಕೆಲ ದಿನಗಳ ಹಿಂದಷ್ಟೇ ಹೆರಿಗೆಯಾಗಿತ್ತು. ಪತ್ನಿ, ಮಗು, ಕುಟುಂಬದವರು ಅಪಾಯದಿಂದ ಪಾರಾಗಿದ್ದಾರೆ. ಆದರೆ, ಮಗು ಜನಿಸಿ ಕೆಲವೇ ದಿನದಲ್ಲಿ ತಂದೆ ಮತಪಟ್ಟಿರುವುದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತೆ ಮಾಡಿದೆ