ಬಾಗಲಕೋಟೆ ತಾಲೂಕಿನ ಭಗವತಿ ಗ್ರಾಮದಲ್ಲಿ ಬುಧವಾರ ಬಿವಿವಿ ಸಂಘದ ಸಜ್ಜಲಶ್ರೀ ನರ್ಸಿಂಗ್ ವಿಜ್ಞಾನಗಳ ಮಹಾವಿದ್ಯಾಲಯದ ಸಮುದಾಯ ಆರೋಗ್ಯ ಶುಶ್ರೂಷಾ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಅಂಗನವಾಡಿ ಮಕ್ಕಳ ಆರೋಗ್ಯ ತಪಾಸಣಾ ಹಾಗೂ ಪೌಷ್ಠಿಕ ಆಹಾರದ ಮಹತ್ವದ ಅರಿವು ಮೂಡಿಸುವ ಕಾರ್ಯಕ್ರಮ.  
ಜಿಲ್ಲೆ

ಮನೆಯ ಆಹಾರ ಒಳ್ಳೆಯ ಆರೋಗ್ಯಕ್ಕೆ ಉತ್ತಮ

ಬಾಗಲಕೋಟೆ: ಮನೆಯಲ್ಲಿ ತಯಾರಿಸುವ ಆಹಾರವೇ ಮಕ್ಕಳ ಆರೋಗ್ಯಕ್ಕೆ ಉತ್ತಮವಾಗಿದ್ದು, ಎಲ್ಲರೂ ಮಕ್ಕಳಿಗೆ ಮನೆಯ ಅಹಾರವನ್ನೆ ನೀಡಿ ಎಂದು ಸಜ್ಜಲಶ್ರೀ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯದ ಸಮುದಾಯ ಆರೋಗ್ಯ ಶುಶ್ರೂಷಾ ವಿಭಾಗದ ಮುಖ್ಯಸ್ಥೆ ಡಾ.ಶಿಲ್ಪಾ ಎನ್. ಕೂಗಲಿ ಹೇಳಿದರು.

ತಾಲೂಕಿನ ಭಗವತಿ ಗ್ರಾಮದಲ್ಲಿ ಬುಧವಾರ ಬಿವಿವಿ ಸಂಘದ ಸಜ್ಜಲಶ್ರೀ ನರ್ಸಿಂಗ್ ವಿಜ್ಞಾನಗಳ ಮಹಾವಿದ್ಯಾಲಯದ ಸಮುದಾಯ ಆರೋಗ್ಯ ಶುಶ್ರೂಷಾ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಅಂಗನವಾಡಿ ಮಕ್ಕಳ ಆರೋಗ್ಯ ತಪಾಸಣಾ ಹಾಗೂ ಪೌಷ್ಠಿಕ ಆಹಾರದ ಮಹತ್ವದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದಿನ ಮಕ್ಕಳಲ್ಲಿ ಪೌಷ್ಠಿಕ ಆಹಾರದ ಕೊರತೆಯಿಂದ ನ್ಯೂನತೆಗಳು ಕಾಣಿಸಿಕೊಳ್ಳುತ್ತಿವೆ. ಮುಖ್ಯವಾಗಿ ಅಂಗನವಾಡಿ ಮಕ್ಕಳಲ್ಲಿ ಕಬ್ಬಿನಾಂಶ ಕೊರತೆಯ ಅನೀಮಿಯಾ ಸಾಮಾನ್ಯವಾಗಿ ಕಂಡು ಬರುತ್ತದೆ. ಪೌಷ್ಠಿಕ ಆಹಾರದ ಕೊರತೆಯು ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸಿ ಅನೇಕ ತರಹದ ಸೋಂಕು ಬರಲು ದಾರಿ ಮಾಡಿಕೊಡುತ್ತದೆ. ಆದ್ದರಿಂದ ತಾಯಂದಿರು ಸರಿಯಾದ ಆಹಾರ ಕ್ರಮ ಪಾಲಿಸಬೇಕು ಎಂದರು.

ಮಹಾವಿದ್ಯಾಲಯದ ಸ್ತಾತಕೋತ್ತರ ಪದವಿ ವಿದ್ಯಾರ್ಥಿಗಳು, ಹೈದರಾಬಾದ ಮಿಕ್ಸ್, ದಾವಣಗೇರೆ ಮಿಕ್ಸ್ ತಯಾರಿಕಾ ವಿಧಾನಗಳ ಬಗೆಗೆ ಮಾಹಿತಿ ನೀಡಿದರು. ಅಲ್ಲದೆ ಭಿತ್ತಿ ಚಿತ್ರಗಳ ಸಹಾಯದಿಂದ ಪೌಷ್ಠಿಕ ಆಹಾರದ ಮಹತ್ವದ ಬಗೆಗೆ ಆರೋಗ್ಯ ಶಿಕ್ಷಣ ನೀಡಿದರು. ಕಾರ್ಯಕ್ರಮದ ಸದುಪಯೋಗ ೩೦ಕ್ಕೂ ಹೆಚ್ಚು ಅಂಗನವಾಡಿ ಮಕ್ಕಳು ಹಾಗೂ ಅವರ ತಾಯಂದಿರು ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಸಮುದಾಯ ಆರೋಗ್ಯ ಶುಶ್ರೂಷಾ ವಿಭಾಗದ ಸಹ ಪ್ರಾಧ್ಯಾಪಕ ರೇಣುಕರಾಜ ನಾಗಮ್ಮನವರ, ಡಾ.ರಾಜಶೇಖರ ಹಿರೇಗೌಡರ, ಉಪನ್ಯಾಸಕ ಜಗದೀಶ ಮ. ಹಿರೇಮಠ, ಲಕ್ಷಿ÷್ಮÃ ಪಾಟೀಲ, ಶ್ರೀದೇವಿ ವನಗೇರಿ ಉಪಸ್ಥಿತರಿದ್ದರು.