ಕೊಳ್ಳೇಗಾಲ ಪಟ್ಟಣದ 13ನೇ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಮಾನಸ ಮನೆ ಮನೆಗೆ ತೆರಖು ಮತಯಾಚನೆ ಮಾಡುತ್ತಿರುವುದು. 
ಜಿಲ್ಲೆ

ಮನೆಮನೆಗೆ ತೆರಳಿ ಮತ ಯಾಚನೆ

Chamarajanagar

ಕೊಳ್ಳೇಗಾಲ: ನಗರಸಭೆ ಉಪಚುನಾವಣೆ ಸಮೀಪಿಸುತ್ತಿದಂತೆ ಪಟ್ಟಣದಲ್ಲಿ ಬಿರುಸಿನ ಮತ ಪ್ರಚಾರ ನಡೆಸಲಾಗುತ್ತಿದೆ. 6ನೇ ವಾರ್ಡ್‌ನ ಬಿಜೆಪಿ ಅಭ್ಯರ್ಥಿ ಎಂ.ಮಾನಸ ಮತದಾರರ ಮನೆ ಬಾಗಿಲಿಗೆ ತೆರಳಿ ಭಾನುವಾರ ಮತಯಾಚಿಸಿದರು.

ಪಟ್ಟಣದ ಹಳೇ ಕುರುಬರ ಬೀದಿ, ಆಸ್ಪತ್ರೆ ವಸತಿ ಗೃಹ, ಪೊಲೀಸ್ ಕ್ವಾಟ್ರರ್ಸ್, ವಕೀಲ ರಾಮಯ್ಯ ಬೀದಿ, ಆರ್.ಸಿ.ಎಂ. ಶಾಲೆಯ ಬಡಾವಣೆಗಳಿಗೆ ಭೇಟಿ ನೀಡಿ ಬಿಜೆಪಿಗೆ ಆಶೀರ್ವದಿಸುವಂತೆ ಮನವಿ ಮಾಡಿದರು.

ಈ ವೇಳೆ ಮಾತನಾಡಿದ ಮಾನಸ, ವಾರ್ಡ್‌ನಲ್ಲಿ ಅಭಿವೃದ್ಧಿ ಕೆಲಸಗಳನ್ನು ಸೂಕ್ತವಾಗಿ ನಿರ್ವಹಿಸಲು ಮತ್ತು ಜನಸೇವೆ ಮಾಡಲು ಬಿಜೆಪಿಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಕುರುಬರ ಸಂಘದ ನಿರ್ದೇಶಕ ಶಶಿಕುಮಾರ್, ಎಂ.ಕೆ.ಮಹದೇವ, ಗಡಿಗೌಡ ಪುಟ್ಟಮಾದೇಗೌಡ, ದೊಳ್ಳೇಗೌಡ, ಆರ್.ಮಹದೇವ, ಪುಟ್ಟಸ್ವಾಮಿ, ಪೇಪರ್ ಚಂದ್ರು, ಗಣೇಶ, ಬಾಲಗಣೇಶ, ಆಟೋ ಗಣೇಶ, ಆನಂದ, ನಿಂಗರಾಜು ಇತರರು ಇದ್ದರು.