ಜಿಲ್ಲೆ

ಮನೆಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ನಷ್ಟ

ಮನೆಗೆ ಬೆಂಕಿ ಬಿದ್ದು ಚಂದ್ರಿಕೆ ಮತ್ತು ಮನೆ ಛಾವಣಿ ಸುಟ್ಟು ಹೋಗಿರುವುದು.

ಹಲಗೂರು: ಹುಸ್ಕೂರು ಸಮೀಪದ ಹುಚ್ಚೇಗೌಡನ ದೊಡ್ಡಿ ಗ್ರಾಮದಲ್ಲಿ ಮನೆಗೆ ಬೆಂಕಿ ಬಿದ್ದ ಪರಿಣಾಮ ಮನೆಯ ಮುಂಭಾಗ ಇದ್ದ ಚಂದ್ರಿಕೆಗಳು, ಮನೆಗೆ ಹಾಕಿದ್ದ ಜಂತಿ ಮತ್ತು ಗಳಗಳು ಸುಟ್ಟು ಹೋಗಿರುವುದರಿಂದ ಸುಮಾರು ಒಂದು ಲಕ್ಷ ರೂ. ನಷ್ಟ ಉಂಟಾಗಿದೆ ಎನ್ನಲಾಗಿದೆ.


ಹುಚ್ಚೇಗೌಡನ ದೊಡ್ಡಿ ಗ್ರಾಮದ ನಿವಾಸಿ ನಾಗರಾಜು ಎಂಬುವರ ಮನೆಗೆ ಬೆಂಕಿ ಬಿದ್ದಿದ್ದು, ಗ್ರಾಮಸ್ಥರೆಲ್ಲ ಸೇರಿ ಬೆಂಕಿ ನಂದಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ನಷ್ಟ ಭರಿಸುವಂತೆ ನಾಗರಾಜು ಅವರು ಮನವಿ ಮಾಡಿದ್ದಾರೆ.
ಹಲಗೂರು ಪೊಲೀಸ್ ಠಾಣೆ ಎಎಸ್‌ಐ ಸಿದ್ದರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.