ಸಂಶಿ: ಭಾನುವಾರ ರಾತ್ರಿ ಸುರಿದ ಮಳೆಯಿಂದಾಗಿ ಬಾಗವಾಡ ಗ್ರಾಮದ ಭರಮಗೌಡ ಪಾಟೀಲ ಎಂಬುವವರ ಮನೆಗೆ ಮಳೆ ನೀರು ನುಗ್ಗಿ ಅಪಾರ ಹಾನಿಯಾಗಿದೆ. ಮನೆಯಲ್ಲಿದ್ದ ಗೃಹೋಪಯೋಗಿ ಸಾಮಗ್ರಿಗಳು ನೀರಿನಲ್ಲಿ ತೇಲಿ ಹೋದವು. ರಾತ್ರಿಯಿಡೀ ಪಾತ್ರೆಗಳು ಮತ್ತು ಮೋಟಾರ್ ಮೂಲಕ ನೀರು ಹೊರ ಹಾಕಬೇಕಾಯಿತು. ಇಷ್ಟೆಲ್ಲ ಹಾನಿಯಾದರೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ ಎಂಬುದು ನಿವಾಸಿಗಳ ದೂರು. ಈಗಲಾದರೂ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.