ಬಳ್ಳಾರಿ : ಇಲ್ಲಿನ ಬಂಡಿಹಟ್ಟಿಯ ರಾಯಣ್ಣ ಕಾಲೊನಿಯ ಮನೆಯೊಂದರಲ್ಲಿ ಶನಿವಾರ ಕಳ್ಳತನವಾಗಿದೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆ, ಬೀಗ ಮುರಿದು ಪ್ರವೇಶ ಮಾಡಿರುವ ಕಳ್ಳರು, ಮನೆಯಲ್ಲಿದ್ದ 35 ಸಾವಿರ ರೂ. ಮೌಲ್ಯದ 7 ಗ್ರಾಂ ಚಿನ್ನದ ಆಭರಣ, ಮೊಬೈಲ್ ಫೋನ್, 10 ಸಾವಿರ ರೂ. ನಗದು ಸೇರಿದಂತೆ ಒಟ್ಟು 47 ಸಾವಿರ ರೂ. ಬೆಲೆಯ ವಸ್ತುಗಳನ್ನು ದೋಚಿದ್ದಾರೆ ಎಂದು ಮನೆ ಮಾಲೀಕ ಕೆ.ಎಸ್ ಯರ‍್ರಿಸ್ವಾಮಿ ಎಂಬುವವರು ಕೌಲ್ ಬಜಾರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.