ಗದಗ: ರೈಲ್ವೆ ಓವರ್ ಬ್ರಿಜ್ ಕಾಮಗಾರಿ ವೇಳೆ ಹೈಡ್ರಾ ಯಂತ್ರದ ಪೈಪ್ ಕಟ್ ಆಗಿ ಮನೆ ಮೇಲೆ ಬೃಹತ್ ಬೀಮ್ (ಅಡ್ಡಕಂಬ) ಉರುಳಿಬಿದ್ದ ಘಟನೆ ಹೊಂಬಳ ರಸ್ತೆಯ ಬಳಿಯ ಅಂಬೇಡ್ಕರ್ ನಗರದಲ್ಲಿ ಗುರುವಾರ ಸಂಭವಿಸಿದೆ.
ಅಂಬೇಡ್ಕರ್ ನಗರದ ಮೌಲಾಸಾಬ್ ಹರ್ಲಾಪೂರ ಎಂಬುವವರ ಮನೆ ಮೇಲೆ ಬೀಮ್ ಉರುಳಿಬಿದ್ದು ಮನೆ ಭಾಗಶಃ ಜಖಂಗೊಂಡಿದ್ದು, ಮನೆಯಲ್ಲಿ ಜೋಳಿಗೆಯಲ್ಲಿ ಮಲಗಿದ್ದ ಎಂಟು ತಿಂಗಳು ಮಗು, ಬಾಣಂತಿ ಮತ್ತು ಗರ್ಭಿಣಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿ ದುರಂತವೊಂದು ತಪ್ಪಿದಂತಾಗಿದೆ. ಮೂವರು ಮನೆಯಲ್ಲಿ ಮಲಗಿದ್ದರು. ಈ ವೇಳೆ ಮನೆಯ ಕೋಣೆ ಗೋಡೆ ಮೇಲೆ ಬೃಹತ್ ಪಿಲ್ಲರ್ ಉರುಳಿಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು.
ಪಿಲ್ಲರ್ ಉರುಳಿ ಬೀಳುವ ಸಂದರ್ಭದಲ್ಲಿ 15 ಜನರಿದ್ದ ಟ್ರ್ಯಾಕ್ಟರ್ವೊಂದು ಕೊದಲೆಳೆಯ ಅಂತರದಲ್ಲಿ ಘಟನಾ ಸ್ಥಳದಿಂದ ಪಾಸ್ ಆಗಿ ಎಲ್ಲರೂ ಬಚಾವ್ ಆಗಿದ್ದಾರೆ. ಘಟನೆಯಲ್ಲಿ ಓರ್ವ ಕಾರ್ವಿುಕ ಹೈಡ್ರಾ ಮಷೀನ್ ಮೇಲಿನಿಂದ ಬಿದ್ದು ಕೈ, ಕಾಲಿಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಬಳಿಕ ಹೆಡ್ರಾ ಯಂತ್ರ, ಕ್ರೇನ್, ಹಿಟಾಚಿಯನ್ನು ಸ್ಥಳದಲ್ಲೇ ಬಿಟ್ಟು ಸಿಬ್ಬಂದಿ ಪರಾರಿಯಾಗಿದ್ದಾರೆ. ಯಾವುದೇ ಮುಂಜಾಗ್ರತಾ ಕ್ರಮ ಇಲ್ಲದೇ ಕಾಮಗಾರಿ ಆರಂಭಿಸಿರುವ ಗುತ್ತಿಗೆದಾರ ಎಂ.ವಿ. ಕನ್ಸ್ಟ್ರಕ್ಷನ್ ಮಾಲೀಕರ ವಿರುದಟಛಿ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸ್ಥಳಕ್ಕೆ ಬಾರದ ರೈಲ್ವೆ ಇಲಾಖೆ ಅಧಿಕಾರಿಗಳ ವಿರುದಟಛಿ ಸ್ಥಳೀಯರ ಕಿಡಿಕಾರಿದರು. ಸ್ಥಳಕ್ಕೆ ಗದಗ ನಗರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದರು.