ಕಲಬುರಗಿ: ಸೇಡಂ ಮುಖ್ಯರಸ್ತೆಯಲ್ಲಿರುವ ಎಂಆರ್‌ಎಂಸಿ ಕಾಲೇಜಿನ ಮುಂಭಾಗದ ಮನೆಯ ಮುಂದೆ ನಿಲ್ಲಿಸಲಾಗಿದ್ದ ಬುಲೆಟ್ ಅನ್ನು ಕಳವು ಮಾಡಲಾಗಿದೆ. ಅಮರೇಶ ಪಾಟೀಲ್ ಎಂಬುವರಿಗೆ ಸೇರಿದ ದ್ವಿಚಕ್ರ ವಾಹನ ಕಳವಾಗಿದೆ. ದಾಂಡಿಯಾ ಕಾರ್ಯಕ್ರಮ ನೋಡಿಕೊಂಡು ಬಂದು ಮನೆಯ ಮಂದೆ ಬೈಕ್ ನಿಲ್ಲಿಸಿ ಮಲಗಿದ್ದರು. ಬೆಳಗ್ಗೆ ಎದ್ದು ನೋಡಿದಾಗ ಬೈಕ್ ಇರಲಿಲ್ಲ. ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.