ಬಾಗಲಕೋಟೆ ನಗರದಲ್ಲಿ ಬಿಜೆಪಿ ನಗರ ಮಂಡಳ ವತಿಯಿಂದ ಹಮ್ಮಿಕೊಂಡಿದ್ದ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಚಾಲನೆ ನೀಡಿದರು.  
ಜಿಲ್ಲೆ

ಮನೆ ಮನೆಗೆ ತೆರಳಿ ಬಿಜೆಪಿ ಸದಸ್ಯತಾ ಅಭಿಯಾನ

ಬಾಗಲಕೋಟೆ: ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪಕ್ಷಗಳಿಗೆ ಸದಸ್ಯತಾ ಅಭಿಯಾನ ಬಹಳ ಮುಖ್ಯವಾಗಿದ್ದು, ದೇಶ ಅಭಿವೃದ್ಧಿಗಾಗಿ ಬಿಜೆಪಿಯ ಸದಸ್ಯರಾಗುವ ಮೂಲಕ ಅಭಿಯಾನ ಯಶಸ್ವಿಗಳಿಸಿ ಎಂದು ಮಾಜಿ ಶಾಸಕ, ಡಾ.ವೀರಣ್ಣ ಚರಂತಿಮಠ ಹೇಳಿದರು.

ನವನಗರದ ೨೦ನೇ ವಾರ್ಡಿನ ಬ೧೮೫.೧೮೬ ಮತ್ತು ೧೮೭ನೇ ಬೂತಿನ ೬೩-೬೧ ನೇ ಸೆಕ್ಟರನಲ್ಲಿ ಮಂಗಳವಾರ ಬಿಜೆಪಿ ನಗರ ಮಂಡಲ ವತಿಯಿಂದ ಹಮ್ಮಿಕೊಂಡ ಬಿಜೆಪಿ ಸದಸ್ಯ ಅಭಿಯಾನದಲ್ಲಿ ಮನೆ ಮನೆ ತೆರಳಿ ಸದಸ್ಯತ್ವ ನೋಂದಣಿ ಮಾಡಿ ಅವರು ಮಾತನಾಡಿದರು.

ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪಕ್ಷಗಳ ಸಂಘಟನೆಯ ದೃಷ್ಠಿಯಿಂದ ಸದಸ್ಯತಾ ಅಭಿಯಾನ ಬಹುಮುಖ್ಯವಾಗಿದ್ದು, ದೇಶ ಅಭಿವೃದ್ಧಿ ದೃಷ್ಠಿಯಿಂದ ಬಿಜೆಪಿಯ ಸದಸ್ಯರಾಗಿ ಎಂದು ವಿನಂತಿಸಿದರು.

ಬಿಟಿಡಿಎ ಮಾಜಿ ಅಧ್ಯಕ್ಷ ಜಿ.ಎನ್.ಪಾಟೀಲ ಮಾತನಾಡಿ, ನಮಗೆ ದೇಶದ ಅಭಿವೃದ್ಧಿ ಮುಖ್ಯವಾಗಿದ್ದು, ದೇಶದ ಅಭಿವೃದ್ಧಿ ಬಿಜೆಪಿ ಪಕ್ಷದಿಂದ ಮಾತ್ರ ಸಾದ್ಯ ಆಗಾಗಿ ಬಿಜೆಪಿ ಸದಸ್ಯತಾ ಅಭಿಯಾನ ಯಶಸ್ವಿಗೊಳಿ ಎಂದರು.

ಬೂತ ಅಧ್ಯಕ್ಷ ರೇಣುಕಾಚಾರ್ಯ ಹೀರೆಮಠ, ವಿಶ್ವನಾಥ ಪಾಟೀಲ, ವಾರ್ಡ ಅಧ್ಯಕ್ಷ ಜಿ.ಎಸ್.ಬಡಿಗೇರ, ಮಹಾಂತೇಶ ಬಾದೊಡಗಿ, ಪ್ರಭಾಕರ ದಡ್ಡೆನ್ನವರ, ಅಶೋಕ ನೂಲಿ, ಪಿ.ಡಿ.ಜತ್ತಿ. ಬಿ.ವೈ.ಅನವಾಲ್, ಎ.ಜಿ.ಹಡಪದ, ನಾಗರಾಜ ಕಲಾಲ, ಪ್ರಭು ಹಡಗಲಿ, ಭಾಗೀರತಿ ಪಾಟೀಲ, ಲತಾ ನೀಲವಾಣಿ, ನಾಗರತ್ನ ಹೆಬ್ಬಳ್ಳಿ, ಬಸವರಾಜ ಹುನಗುಂದ, ಉಮೇಶ ಹಂಚಿನಾಳ, ಗಣೇಶ ಲಗಳಿ, ಚಂದ್ರು ಸರೂರ ಸೇರಿದಂತೆ ಇತರರು ಇದ್ದರು.