ಯಾದಗಿರಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಯಾದಗಿರಿಯಲ್ಲಿ ಬುಧವಾರ ಕನರ್ಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಘಟಕದಿಂದ ಕಾರ್ಮಿಕ ಇಲಾಖೆ ಅಕಾರಿಗೆ ಮನವಿ ಸಲ್ಲಿಸಲಾಯಿತು.
ಕಟ್ಟಡ ಕಾರ್ಮಿಕರಿಗೆ ನ್ಯಾಯಯುತ ಹಕ್ಕುಗಳನ್ನು ಒದಗಿಸಲು ನಿರಂತರವಾಗಿ ಹೋರಾಟ ನಡೆಸಿದ ಪ್ರತಿಫಲದಿಂದಾಗಿ ಕಲ್ಯಾಣ ಮಂಡಳಿ ಅಸ್ತಿತ್ವಕ್ಕೆ ಬಂದಿದೆ. ಆದರೆ ಘೋಷಿತ ಸೌಲಭ್ಯಗಳನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ. ಸಕಾಲದಲ್ಲಿ ಅಜರ್ಿ ವಿಲೇವಾರಿ ಮಾಡದೆ ಮಂಡಳಿ ವಿಳಂಬ ನೀತಿಯನ್ನು ಅನುಸರಿಸುತ್ತಿದೆ. ಕಾರ್ಮಿಕರನ್ನು ಹಕ್ಕುಗಳಿಂದ ವಂಚಿತರನ್ನಾಗಿಸುತ್ತಿರುವುದು ಅತ್ಯಂತ ನೋವಿನ ಸಂಗತಿ ಎಂದು ಪದಾಕಾರಿಗಳು ಆರೋಪಿಸಿದರು.
ನೋಂದಾಯಿತ ಕಾರ್ಮಿಕನ ಇಡೀ ಕುಟುಂಬಕ್ಕೆ ಆರೋಗ್ಯ ಸೌಲಭ್ಯ ಮರೀಚಿಕೆಯಾಗಿದೆ. ಕಳೆದ 2 ವರ್ಷ ಗಳಿಂದ ಬರಬೇಕಾದ ಶೈಕ್ಷಣಿಕ ಸಹಾಯಧನ ಇನ್ನೂ ಬಂದಿಲ್ಲ. ಎಲ್ಲರಿಗೂ ಸೂರು ಕಟ್ಟುವ ಈ ಕಟ್ಟಡ ಕಾರ್ಮಿಕರು ತಮಗೊಂದು ಗೂಡು ಕಟ್ಟಿಕೊಳ್ಳಲು ಆಗುತ್ತಿಲ್ಲ ಎಂದರು.
ಅರ್ಹ ಕಾರ್ಮಿಕರಿಗೆ ಪಿಂಚಣಿಗಾಗಿ 6 ತಿಂಗಳೂಳಗೆ ಅಜರ್ಿ ಸಲ್ಲಿಸಬೇಕೆಂಬ ನಿಯಮ ತೆಗೆದು ಹಾಕಬೇಕು. 5ಲಕ್ಷ ರೂ.ಗಳ ನಗದು ರಹಿತ ಆರೋಗ್ಯ ಸೇವೆಯನ್ನು ನೋಂದಾಯಿತ ಕಟ್ಟಡ ಕಾಮರ್ಿಕರಿಗೆ ಹಾಗೂ ಅವರ ಅವಲಂಬಿತರಿಗೆ ಕೂಡಲೇ ಜಾರಿಗೊಳಿಸಬೇಕು. ಕಟ್ಟಡ ನಿರ್ಮಿಣ ಕಾರ್ಮಿಕರಿಗೆ ಸ್ವಂತ ಮನೆ ನಿರ್ಮಿಣಕ್ಕೆ ಮಂಡಳಿಯು 5 ಲಕ್ಷ ರೂ.ಸಹಾಯಧನ ಒದಗಿಸಬೇಕು ಎಂದು ಆಗ್ರಹಿಸಿದರು.
ಸಂಘದ ಜಿಲ್ಲಾ ಸಂಚಾಲಕ ರಾಮಲಿಂಗಪ್ಪ ಬಿ.ಎನ್., ಸದಸ್ಯರಾದ ಭೀಮಪ್ಪ, ಶಂಕರ್ ಠಾಕೂರ್, ಮಲ್ಲಿಕಾಜರ್ುನ್, ಮಲ್ಲೇಶ್ ವಡ್ಡರ್, ಯಲ್ಲಾಲಿಂಗ, ಬಂದೇ ನವಾಜ್, ಅಂಬ್ರೇಶ್ ಇದ್ದರು.