ಜಿಲ್ಲೆ

ಮನೆ ಕುಸಿದು ಐವರಿಗೆ ಗಾಯ

ಧಾರವಾಡ: ಸತತ ಮಳೆಯಿಂದ ಮನೆ ಕುಸಿದು ಐವರು ಗಾಯಗೊಂಡ ಘಟನೆ ತಾಲೂಕಿನ ತಡಕೋಡ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ. ಗ್ರಾಮದ ಹರಿಜನಕೆರಿಯ ರುದ್ರಪ್ಪ ಮೇಲಿನಮನಿ ಎಂಬುವರ ಮನೆಯು ಅತಿಯÁದ ಮಳೆಯಿಂದ ಕುಸಿದಿದ್ದು, ಪಕ್ಕದ ಮನೆಗೂ ಹಾನಿಯÁಗಿದೆ. ರುದ್ರಪ್ಪ ಮೇಲಿನಮನಿ ಅವರ ಮನೆಯಲ್ಲಿದ್ದ ಲಕ್ಷಿ÷್ಮÃ ಮೇಲಿನಮನಿ, ದೀಪಾ ಮೇಲಿನಮನಿ, ನಂದಾ ಮೇಲಿನಮನಿ, ಸಂಗೀತಾ ಮೇಲಿನಮನಿ ಹಾಗೂ ಶ್ರಾವಣಿ ಮೇಲಿನಮನಿ ಎಂಬುವರಿಗೆ ಗಾಯಗಳಾಗಿವೆ. ಮನೆಯಲ್ಲಿದ್ದ ಇನ್ನಿಬ್ಬರಿಗೆ ಯÁವುದೇ ಗಾಯಗಳಾಗಿಲ್ಲ. ಮಧ್ಯರಾತ್ರಿ ರುದ್ರಪ್ಪ ಮೇಲಿಮನಿ ಅವರ ಮನೆ ಗೋಡೆ ಕುಸಿದು ಬೀಳುತ್ತಿದ್ದಂತೆ ಅಕ್ಕಪಕ್ಕದ ಮನೆಯವರು ಧಾವಿಸಿ ಕುಟುಂಬಸ್ಥರನ್ನು ರಕ್ಷಿಸಿದ್ದಾರೆ. ಗಾಯÁಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುದ್ದಿ ತಿಳಿದು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ತಹಸೀಲ್ದಾರ್ ಸಂತೋಷ ಹಿರೇಮಠ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ನಂತರ ತಹಸೀಲ್ದಾರ್, ಇಂಜಿನಿಯರ್, ಗ್ರಾಮ ಲೆಕ್ಕಾಽಕಾರಿಗಳು ಗ್ರಾಮಕ್ಕೂ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ತಹಸೀಲ್ದಾರ್ ಸಂತೋಷ ಹಿರೇಮಠ, ಸಂತ್ರಸ್ತ ಕುಟುಂಬಕ್ಕೆ ಮನೆ ಹಾನಿಯ ಪರಿಹಾರವನ್ನು ತ್ವರಿತವಾಗಿ ನೀಡುವ ಭರವಸೆ ನೀಡಿದ್ದಾರೆ.