ಸಿದ್ದಾಪುರ: ಚೆನ್ನಯ್ಯನ ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಚಿಕ್ಕ ರೇಷ್ಮೆ ಹಾಗೂ ಕೋಟೆ ಮಚ್ಚಿ ಹಾಡಿಯಲ್ಲಿ ಎರಡು ಮನೆಗಳು ಕುಸಿದು ಬಿದ್ದ ಕುಟುಂಬದವರಿಗೆ ಗುರುವಾರ ಗ್ರಾಪಂ ಕಚೇರಿ ಸಭಾಂಗಣದಲ್ಲಿ ಪ್ಲಾಸ್ಟಿಕ್ ಟಾರ್ಪಲ್ ಮತ್ತು ಆಹಾರ ಕಿಟ್‌ಗಳನ್ನು ವಿತರಿಸಲಾಯಿತು.
ಆಹಾರ ಕಿಟ್‌ಗಳನ್ನು ವಿತರಿಸಿದ ಗ್ರಾಪಂ ಅಧ್ಯಕ್ಷ ಅರುಣ್‌ಕುಮಾರ್ ಸರ್ಕಾರದಿಂದ ಸಿಗುವ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು. ಉಪಾಧ್ಯಕ್ಷೆ ಎಚ್.ಎಲ್ ಕಾವೇರಿ, ಸದಸ್ಯರಾದ ಟಿ.ಪಿ.ನಾಗರಾಜ್, ಎಚ್.ಆರ್.ರವಿ ಪಿಡಿಒ ಬಿ.ಪ್ರಕಾಶ್ ಇತರರಿದ್ದರು.