ಜಿಲ್ಲೆ

ಮನುಷ್ಯನಿಗೆ ಸದ್ಗುಣವೇ ಆಭರಣ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಾನವ ಹುಟ್ಟು ಆಕಸ್ಮಿಕ. ಬದುಕಿನುದ್ದಕ್ಕೂ ಸತ್ಕಾರ್ಯ, ಉತ್ತಮ ವಿಚಾರ, ದಾನಗಳಿಂದ ನಮ್ಮ ಜೀವನ ಪಾವನಗೊಳಿಸಿಕೊಳ್ಳಬೇಕು ಎಂದು ಶಿರಕೋಳ ಹಿರೇಮಠದ ಪಟ್ಟಾಧ್ಯಕ್ಷ ಶ್ರೀ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಕೊಪ್ಪದಕೇರಿ ಶಿವಾಲಯದಲ್ಲಿ ಶಿವಾಲಯ ಸೇವಾ ಸಮಿತಿಯು ಶ್ರಾವಣ ಮಾಸದ ನಿಮಿತ್ತ ಏರ್ಪಡಿಸಿರುವ ಆಧ್ಯಾತ್ಮಿಕ ಪ್ರವಚನಕ್ಕೆ ಗುರುವಾರ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.
ಮನಸ್ಸಿನ ಹತೋಟಿಗೆ ಶ್ರಾವಣ ಮಾಸ ಆಚರಣೆ ಅಗತ್ಯ. ಚಂಚಲ ಮನಸ್ಸು ಸೌಂದರ್ಯ, ಸಂಪತ್ತು, ಅಂತಸ್ತಿನ ಬೆನ್ನುಬಿದ್ದು ವರ್ಷ ಪೂರ್ತಿ ಜೀವ ತೊಳಲಾಡುತ್ತದೆ. ಅದನ್ನು ನಿಯಂತ್ರಿಸಿ ಧರ್ಮಮಾರ್ಗದಲ್ಲಿ ನಡೆಯಲು ಶ್ರಾವಣ ಮಾಸ ಶುದ್ಧೀಕರಣ ನೀಡುತ್ತದೆ. ಆಧುನಿಕ ಜೀವನದಲ್ಲಿ ಮನುಷ್ಯ ಸಂಸ್ಕೃತಿ, ಸಂಸ್ಕಾರ, ಧರ್ಮದಿಂದ ವಿಮುಖನಾಗಿ, ವಿಕಾರವಾದ ಮನಸ್ಸು ಹೊಂದುತ್ತಿದ್ದಾನೆ. ಧರ್ಮದಿಂದ ಮಾತ್ರ ಸಮಾಜ ಉಳಿಯಲು ಸಾಧ್ಯ ಎಂದರು.
ಸಮಿತಿ ಅಧ್ಯಕ್ಷ ಡಾ.ಎಸ್.ಆರ್.ರಾಮನಗೌಡರ ಮಾತನಾಡಿದರು. ಸಿ.ಎಸ್.ಪಾಟೀಲ, ಬಸವರಾಜ ಕಡಕೋಳ, ಬಸವರಾಜ ಕಂಚನಹಳ್ಳಿ, ಜಯಶ್ರೀ ಪಾಟೀಲ, ಈರಪ್ಪ ಗಂಭೀರ, ಎಂ.ಬಿ. ನಗರ, ಇತರರು ಇದ್ದರು.
ಬಸವರಾಜ ಕೌಜಲಗಿ ಸ್ವಾಗತಿಸಿದರು. ಶ್ರೀಕಾಂತ ಪುರ್ಲಿ ನಿರೂಪಿಸಿದರು. ಪ್ರೊ. ಬಸಯ್ಯ ಶಿರೋಳ ವಂದಿಸಿದರು.