ಆಲೂರು: ಬಡ ಜನತೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ತಜ್ಞ ವೈದ್ಯರು ಲಭ್ಯವಿದ್ದಾಗ ಶಿಬಿರದಲ್ಲಿ ಪಾಲ್ಗೊಂಡು ಉಚಿತ ಆರೋಗ್ಯ ಶಿಬಿರದ ಸದುಪಯೋಗಪಡೆದುಕೊಳ್ಳಬೇಕು ಎಂದು ಆಲೂರು ಲಯನ್ ಸೇವಾ ಸಂಸ್ಥೆ ಅಧ್ಯಕ್ಷ ಡಿ.ಜೆ ನವೀನ್ ದಡದಳ್ಳಿ ಹೇಳಿದರು.
ಪಟ್ಟಣದ ಎಸ್.ಬಿ.ಐ ಬ್ಯಾಂಕ್ ಪಕ್ಕದಲ್ಲಿರುವ ಆನಂದ್ ಆರ್ಕೆಡ್ ಸಭಾಂಗಣದಲ್ಲಿ ಆಲೂರು ಲಯನ್ ಸೇವಾ ಸಂಸ್ಥೆ ವತಿಯಿಂದ ಆಯೋಜಿಸಿದ್ದ ವಾಕ್ (ಮಾತು) ಶ್ರವಣ (ಕಿವಿ) ದೊಷವಿರುವವರಿಗೆ ಉಚಿತ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಯಾರಿಗೆ ಅಗತ್ಯತೆ ಇರುತ್ತದೆಯೋ ಅಲ್ಲಿ ಸೇವೆ ಮಾಡುವ ಕೆಲಸವನ್ನು ನಮ್ಮ ಲಯನ್ನ ಕ್ಲಬ್ ವತಿಯಿಂದ ಮಾಡಿಕೊಂಡು ಬರಲಾಗುತ್ತಿದೆ. ಮನುಷ್ಯನಿಗೆ ಆರೋಗ್ಯವೇ ಮುಖ್ಯ, ಅದನ್ನು ನಾವು ಕಾಪಾಡಿಕೊಳ್ಳಬೇಕು ಆದ್ದರಿಂದ ಈ ಶಿಬಿರದ ಉಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು. ಗ್ರಾಮೀಣ ಭಾಗದ ಹಾಗೂ ನಗರ ಪ್ರದೇಶದ ಬಡ ಜನರಿಗೆ ಇಂತಹ ಉಚಿತ ಶಿಬಿರಗಳ ಮೂಲಕವೇ ಚಿಕಿತ್ಸೆಗೊಳಪಡಿಸಿದಾಗ ಮಾತ್ರ ಅವರನ್ನು ಸಂಕಷ್ಟದಿಂದ ಪಾರು ಮಾಡಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ವೈದ್ಯರುಗಳಾದ ಡಾ.ಹಸಬ್ ಅನ್ ಫಲ್,ಡಾ.ರೊಷನ್, ಡಾ.ಅಸರುದ್ದಿನ್, ಡಾ.ತಾಮಸ್, ದುಶಂತ್, ಆಲೂರು ಲಯನ್ ಸೇವಾ ಸಂಸ್ಥೆ ಕಾರ್ಯದರ್ಶಿ ಕಾಂತರಾಜ್, ಖಜಾಂಚಿ ವಕೀಲ ಮಂಜೇಗೌಡ, ಸದಸ್ಯ ಪ್ರವೀಣ್, ದರ್ಶನ್, ರಂಗನಾಥ, ಗಿರೀಶ್, ಗೌಸ್ ಮೊದಿನ್, ಸುದೀಶ್ ಮುಂತಾದವರು ಹಾಜರಿದ್ದರು.