ಜಿಲ್ಲೆ

ಮನುಕುಲ ಬೆಳಗಿದ ಕರ್ಮಯೋಗಿ

ಸಂತೋಷ ದೇಶಪಾಂಡೆ
ಬಾಗಲಕೋಟೆ: ಸಮಾಜ ಸೇವೆ ಮಾಡುವ ಮನೋಧರ್ಮವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕೆಂಬುದನ್ನು 12ನೇ ಶತಮಾನದ ಶರಣ ಶಿವಯೋಗಿ ಶ್ರೀ ಸಿದ್ದರಾಮೇಶ್ವರ ತಮ್ಮ ಕಾಯಕದ ಮೂಲಕ ತೋರಿಸಿಕೊಟ್ಟಿದ್ದಾರೆ ಅವರ ತತ್ವಾದರ್ಶಗಳನ್ನು  ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕರಾದ ಹೆಚ್ ವೈ ಮೇಟಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನವನಗರದ ಡಾ.ಬಿ.ಆರ್.ಅಂಬೇಡ್ಕರ ಸಭಾಭವನದಲ್ಲಿ ನಡೆದ  ಶಿವಯೋಗಿ ಶ್ರೀ ಸಿದ್ದರಾಮೇಶ್ವರರ ಜಯಂತಿ ಉತ್ಸವ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟನೆ  ಮಾಡಿ, ಮಾತನಾಡಿದರು. ಮುಂದುವರೆದು ಮಾತನಾಡಿ ಮನುಷ್ಯ ಧರ್ಮವೇ ನಿಜವಾದ ಧರ್ಮ ಎಂದು ಭೋದಿಸಿರುವ ಕರ್ಮಯೋಗಿ ಶ್ರೀ ಸಿದ್ಧರಾಮೇಶ್ವರರ ತತ್ವಾದರ್ಶಗಳು ಸರ್ವಕಾಲಕ್ಕೂ  ಸಮಾಜಕ್ಕೆ ಬೆಳಕು ನೀಡುತ್ತವೆ. ಶರಣರು ಹೇಳಿರುವ ಮನಕುಲದ ಸಂದೇಶಗಳನ್ನು ಸಮಾಜದಲ್ಲಿ ಉಳಿಸುವ, ಬೆಳೆಸುವ ಜವಾಬ್ದಾರಿ ನಮ್ಮದಾಗಬೇಕು ಅಂದಾಗ ಶರಣರ ಕಂಡ ಸಮ ಸಮಾಜದ  ನಿಮಾರ್ಣ ಮಾಡುವ ಕನಸು ನನಸು ಮಾಡಲು ಸಾಧ್ಯವಾಗುತ್ತದೆ ಎಂದರು.
 ಬಾಗಲಕೋಟೆ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ ಚಂದ್ರಶೇಖರ ಕಾಳನ್ನವರ  ವಿಶೇಷ ಉಪನ್ಯಾಸ ನೀಡಿ ಮಾತನಾಡಿ,  12 ನೇ ಶತಮಾನದ ಶರಣರ ಸಮೂಹದಲ್ಲಿದ್ದ ಶ್ರೀ ಶಿವಯೋಗಿ ಸಿದ್ದರಾಮೇಶ್ವರರು  ಬಸವಣ್ಣನವರ  ಪ್ರೇರಣೆಯಿಂದ ಕಾಯಕ ತತ್ವದ ಸಮಾಜ ಸೇವೆಯನ್ನು ಮತ್ತು ಶೂನ್ಯ ಸಿಂಹಾಸನ ಪೀಠದ ಪೀಠಾಧಿಪತಿಯಾಗಿದ್ದ ಅಲ್ಲಮ ಪ್ರಭುಗಳ ದರ್ಶನದಿಂದ ಶಿವಯೋಗಿಯಾದವರು ಶ್ರೀ ಸಿದ್ದರಾಮೇಶ್ವರರು.. ಅವರು ಶ್ರೀಶೈಲಕ್ಕೆ ತೆರಳಿ ಮಲ್ಲಿಕಾರ್ಜುನನನ್ನು ಒಲಿಸಿಕೊಂಡು ತನ್ನ ಕಾಯಕದ ಪವಾಡವನ್ನ ಸೃಷ್ಟಿಸಿದವರು. ಸೋಲಾಪುರದಲ್ಲಿ ಬರಗಾಲ ಬಂದಾಗ ಶರಣರನ್ನ ಸೇರಿಸಿಕೊಂಡು ಕೆರೆಯನ್ನ ಕಟ್ಟುವ ಮೂಲಕ ಸಕಲ ಜೀವಾವಳಿಯ ನೆಮ್ಮದಿಯ ಬದುಕಿಗೆ ನೆಲೆ ಒದಗಿಸಿದರು.  ದೇವಾಲಯಗಳನ್ನು ನಿರ್ಮಾಣ ಮಾಡುವ ಮೂಲಕ ತಮ್ಮ ಕಾಯಕದಲ್ಲಿ ತೊಡಗಿ ಕರ್ಮಯೋಗಿಯಾಗಿ ಸಮಾಜವನ್ನು ಬೆಳೆಗಿದ ಮಹಾಶರಣ  ಶ್ರೀ ಸಿದ್ದರಾಮೇಶ್ವರರು. ಅವರ ವಚನಗಳಲ್ಲಿರುವ ಸಾಮಾಜಿಕ, ಮಾನವೀಯ ಮೌಲ್ಯಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಸಿದ್ದರಾಮಪ್ಪ ಪಾತ್ರೋಟ ಅವರು ಮಾತನಾಡಿ ಶಿವಯೋಗಿ ಸಿದ್ದರಾಮೇಶ್ವರರು ಹೇಳಿರುವ ಸಾಮಾಜಿಕ ಮೌಲ್ಯಗಳನ್ನು ನಮ್ಮ ಮಕ್ಕಳಿಗೆ ಹೇಳುವ ಮೂಲಕ ಸಮಾಜವನ್ನು ಶಿಕ್ಷಣದ ಮೂಲಕ ಅಭಿವೃದ್ಧಿಪಡಿಸಲು ನಾವೆಲ್ಲರೂ ಶ್ರಮಿಸಬೇಕೆಂದು ಹೇಳಿದರು.    ಬಾಗಲಕೋಟೆ ತಹಶಿಲ್ದಾರರಾದ ಎಂ.ಜಿ ಬಿರಾದಾರ ಅವರು ಮಾತನಾಡಿ ಶಿವಯೋಗಿ ಸಿದ್ದರಾಮೇಶ್ವರರ ಸಾಮಾಜಕ ಕಾರ್ಯಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕರಣಕುಮಾರ ಜೈನಾಪೂರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಶ್ರೀ ಸಿದ್ಧರಾಮೇಶ್ವರರ ತಿಳಿಸಿರುವ  ವಿಚಾರಧಾರೆಗಳನ್ನು ನಮ್ಮ ಬದುಕಿನಲ್ಲಿ  ಅಳವಡಿಸಿಕೊಳ್ಳಬೇಕೆಂದು ಹೇಳಿದರು. ಕಾಂಗ್ರೇಸ್ ಮುಖಂಡರಾದ ನಾಗರಾಜ  ಹದ್ಲಿ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು.