ಜಿಲ್ಲೆ

ಮನುಕುಲ ಅಭಿವೃದ್ಧಿಗೆ ಬಳಕೆಯಾಗಲಿ ಜ್ಞಾನ

ಕಲಬುರಗಿ: ನ್ಯಾಯಮೂರ್ತಿ ಡಾ.ಶಿವರಾಜ ಪಾಟೀಲರ ಜ್ಞಾನ ಮತ್ತು ಹೃದಯ ಪ್ರೀತಿ ಮಾನವನನ್ನು ಸಂವೇದನಾಶೀಲ, ಸಮರ್ಥ ವ್ಯಕ್ತಿಯಾಗಿ ಮಾಡುತ್ತದೆ. ಇಂತಹ ನುಡಿಮುತ್ತುಗಳು ಅವರ ಜೀವನ ಅನುಭವದ ಜ್ಞಾನ ಕಿರಣಗಳಾಗಿವೆ ಎಂದು ಹಿರಿಯ ಸಾಹಿತಿ ಡಾ.ಎಸ್.ಜಿ. ಸಿದ್ದರಾಮಯ್ಯ ಹೇಳಿದರು.
ಜಸ್ಟಿಸ್ ಶಿವರಾಜ ಪಾಟೀಲ್ ಪ್ರತಿಷ್ಠಾನ ಸಹಯೋಗದಡಿ ಶ್ರಾವಣ ನಿಮಿತ್ತ ನಗರದ ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ್ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ವ್ಯಕ್ತಿತ್ವ ವಿಕಸನದ ಪ್ರೇರಣೋಪನ್ಯಾಸ, ನ್ಯಾಯಮೂರ್ತಿ ಡಾ.ಶಿವರಾಜ ಪಾಟೀಲರ ಮುಂಜಾವಿಗೊAದು ನುಡಿಕಿರಣ ನುಡಿಮುತ್ತುಗಳ ಚಿಂತನ-ಮAಥನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇವರು ಅಮೂರ್ತ ಇಲ್ಲ, ಕಣ್ಣೆದುರಿಗಿರುವ ಸಮಾಜವೇ ದೇವರು. ಸಮಾಜ ಸೇವೆ ಮಾಡಬೇಕು. ಕಷ್ಟದಲ್ಲಿರುವವರನ್ನು ಕಂಡಾಗ ಹೃದಯ ಮಿಡಿಯಬೇಕು. ಶಿಕ್ಷಣದ ಉದ್ದೇಶ ಹೃದಯ ಸಂಸ್ಕಾರ ಮಾಡುವುದು. ಬುದ್ಧಿ-ಭಾವಗಳ ಸಂಬಂಧದಿಂದ ನಮ್ಮಲ್ಲಿ ಪ್ರತಿಭೆ ಎಂಬ ಬೆಳಕು ಬೆಳಗಲು ಸಾಧ್ಯವಾಗುತ್ತದೆ ಎಂದರು.
ವಿದ್ಯಾರ್ಥಿಗಳು ಬದುಕನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು. ಸರ್ವಜ್ಞ ಮಹಾನ್ ಜ್ಞಾನಿ. ಹರಿಯುವ ನೀರಿನಂತೆ ಲೋಕಕ್ಕೆ ಜ್ಞಾನ ನೀಡಿದ್ದಾರೆ. ಸರ್ವಜ್ಞ ಕಾಲೇಜಿನ ವಿದ್ಯಾರ್ಥಿಗಳು ಶಿಸ್ತು, ಉತ್ತಮ ಸಂಸ್ಕೃತಿ ತನ್ನದಾಗಿಸಿಕೊಂಡಿದ್ದು ಶ್ಲಾಘನೀಯ. ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಮಾನವ ಕುಲದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾಲೇಜಿನ ಪ್ರಾಚಾರ್ಯ ಎಂ.ಸಿ. ಕಿರೇದಳ್ಳಿ ಸ್ವಾಗತಿಸಿದರು. ತಂತ್ರಾಂಶ ಇಲಾಖೆ ನಿರ್ದೇಶಕ ವೀರಶೆಟ್ಟಿ ಗಾರಂಪಳ್ಳಿ, ಸಾಹಿತಿ ಬಿ.ಎಚ್.ನಿರಗುಡಿ, ಚಿ.ಸಿ. ನಿಂಗಣ್ಣ, ಪ್ರಭುಗೌಡ ಸಿದ್ಧಾರೆಡ್ಡಿ, ಕರುಣೇಶ ಹಿರೇಮಠ, ಗುರುರಾಜ ಕುಲಕರ್ಣಿ ಇತರರಿದ್ದರು. ಡಾ.ವಿದ್ಯಾವತಿ ಪಾಟೀಲ್ ನಿರೂಪಣೆ ಮಾಡಿದರು.