ಮುಗಳಖೋಡ: ಯೋಗಾಸನದಿಂದ ಸದೃಢ ದೇಹ, ಮನಸ್ಸು ಹೊಂದಲು ಸಾಧ್ಯ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ ಹೇಳಿದರು.
ಪಟ್ಟಣದ ಶನಿವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿದರು. ಜಾರಕಿಹೊಳಿ ಗ್ರಾಮದ ಕೃಪಾನಂದ ಸ್ವಾಮೀಜಿ ಯೋಗ ಮಹತ್ವದ ಕುರಿತು ಮಾತನಾಡಿದರು.
ಮುಖಂಡರಾದ ರಮೇಶ ಖೇತಗೌಡರ, ಹಿರಿಯರಾದ ಬಸಗೌಡ ಖೇತಗೌಡರ, ಸಿದ್ದು ಮೂಡಲಗಿ, ವಸಂತ ಲಾಳಿ, ಶಿವಾನಂದ ಗೋಕಾಕ, ಬಾಹುಬಲಿ ಬಾಬಣ್ಣವರ, ಮಹಾದೇವ ಶೇಗುಣಸಿ, ಶಿವು ಚೌಗಲಾ, ಕಾಂತು ಬಾಡಗಿ, ಲತಾ ಹುದ್ದಾರ, ಅಣ್ಣಪೂರ್ಣ ಯರೆಡತ್ತಿ, ಕವಯತ್ರಿ ಚೈತ್ರಾ ಖೇತಗೌಡರ, ಶಿವಲೀಲಾ ಚೌಗಲಾ, ಅಪ್ಪಾಸಾಹೇಬ ಖೇತಗೌಡರ, ಮುರೆಪ್ಪ ಶೇಗುಣಸಿ ಇತರರಿದ್ದರು.