ಜಿಲ್ಲೆ

ಮನಸ್ಸಿನ ಆರೋಗ್ಯಕ್ಕೆ ಆಧ್ಯಾತ್ಮ ಅವಶ್ಯಕ : ಡಾ.ಎಸ್.ಪಿ. ಯೋಗಣ್ಣ

ಮೈಸೂರು: ಕಾಯಿಲೆ ಇಲ್ಲ ಅಂದ ಮಾತ್ರಕ್ಕೆ ಒಬ್ಬ ವ್ಯಕ್ತಿ ಆರೋಗ್ಯವಾಗಿದ್ದಾನೆ ಎಂದು ಹೇಳಲು ಸಾಧ್ಯವಿಲ್ಲ, ಆತ ಎಷ್ಟು ಸಂತೋಷ ಹಾಗೂ ನೆಮ್ಮದಿಯಾಗಿದ್ದೇವೆ ಎಂಬುದರ ಆಧಾರದ ಮೇಲೆ ಆತನ ಆರೋಗ್ಯವನ್ನು ಅಳೆಯಬೇಕು ಎಂದು ಹೃದ್ರೋಗ ತಜ್ಞ ಡಾ.ಎಸ್.ಪಿ. ಯೋಗಣ್ಣ ಹೇಳಿದರು.

ಶ್ರೀ ರಾಮಕೃಷ್ಣ ಜಾತ್ರಾ ಮಹೋತ್ಸವ ಸಮಿತಿ ವತಿಯಿಂದ ರಾಮಕೃಷ್ಣನಗರದ ರಾಮಕೃಷ್ಣ ವೃತ್ತದಲ್ಲಿ ಶುಕ್ರವಾರ ಶ್ರೀ ರಾಮಕೃಷ್ಣ ಪರಮಹಂಸರ 188ನೇ ಜನ್ಮದಿನೋತ್ಸವ ಪ್ರಯುಕ್ತ ‘ಆಧ್ಯಾತ್ಮಿಕ ಆರೋಗ್ಯ’ ವಿಷಯದ ಕುರಿತು ಏರ್ಪಡಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾವು ಸಂತೋಷ ಹಾಗೂ ನೆಮ್ಮದಿಯಾಗಿ ಇರಬೇಕಾದರೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ನಮ್ಮ ಮನಸ್ಸು ಉತ್ತಮವಾಗಿ ಇಲ್ಲದೆ ಇದ್ದರೆ ಹಲವು ಕಾಯಿಲೆಗಳು ಕಾಣಿಸಿಕೊಳ್ಳುತ್ತದೆ. ಮನಸ್ಸಿಗೂ ದೈಹಿಕ ಆರೋಗ್ಯಕ್ಕೂ ನೇರವಾದ ಸಂಬಂಧವಿದೆ. ಹಾಗಾಗಿ ಮನಸ್ಸಿನ ಆರೋಗ್ಯ ಕಾಪಾಡಿಕೊಂಡರೆ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಮನಸ್ಸಿನ ಆರೋಗ್ಯ ಕಾಪಾಡಿಕೊಳ್ಳಲು ನಮಗೆ ಆಧ್ಯಾತ್ಮದ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.

ಮನಸ್ಸಿನ ಆರೋಗ್ಯ ಕಾಪಾಡಲು ಧ್ವೇಷ, ಅಸೂಸೆಯನ್ನು ತೊಡೆದು ಹಾಕಬೇಕು. ಧ್ವೇಷ, ಅಸೂಸೆಯ ನಮ್ಮ ಮನಸ್ಸಿನ ಆರೋಗ್ಯ ವನ್ನು ಹದಗೆಡಿಸುತ್ತದೆ. ಸಂತೋಷ ಹಾಗೂ ಅಸಂತೋಷ ನಡುವೆ ಮನುಷ್ಯ ತೊಳಲಾಡುತ್ತಿದ್ದಾನೆ. ಮನಸ್ಸನ್ನು ಸದಾ ಸಂತೋಷವಾಗಿ ಇಡಲು ಆಧ್ಯಾತ್ಮದಿಂದ ಮಾತ್ರ ಸಾಧ್ಯ ಎಂದು ಅಭಿಪ್ರಾಯಪಟ್ಟರು.