ಕೊಡೇಕಲ್: ಭಜನೆಗಳು ಮನಸ್ಸಿಗೆ ನೆಮ್ಮದಿ ನೀಡುವುದಲ್ಲದೆ ನಮ್ಮ ಸಂಸ್ಕೃತಿಯನ್ನು ಗಟ್ಟಿಗೊಳಿಸುತ್ತದೆ ಎಂದು ಬಸವ ಪೀಠಾಧಿಪತಿ ಶ್ರೀ ವೃಷಭೇಂದ್ರ ಅಪ್ಪ ನುಡಿದರು.
ಗ್ರಾಮದ ನಿಜಲಿಂಗೇಶ್ವರ ದೇವಸ್ಥಾನದಲ್ಲಿ ಒಂದು ತಿಂಗಳು ಕಾಲ ನಡೆದು ಬಂದ ಭಜನಾ ಕರ‍್ಯಕ್ರಮದ ನಿಮಿತ್ತ ಮಂಗಳವಾರ ರಾತ್ರಿ ಜರುಗಿದ ಭಜನಾ ಮಂಗಲೋತ್ಸವದಲ್ಲಿ ಆಶೀರ್ವಚನ ನೀಡಿದ ಅವರು, ಭಜನೆ ಎಂದರೆ ಭಗವಂತನನ್ನು ಸ್ಮರಣೆ ಮಾಡುವುದು. ಇದರಿಂದ ನಮ್ಮ ಮನಸ್ಸಿಗೆ ನೆಮ್ಮದಿ ಮತ್ತು ಶಾಂತಿ ಲಭಿಸುತ್ತದೆ ಎಂದರು.
ಯಾವ ಊರಿನಲ್ಲಿ ಭಜನೆ ಮಾಡುವ ಮೂಲಕ ದೇವರ ಆರಾಧನೆ ಮಾಡುತ್ತಾರೋ ಆ ಊರು ಸದಾಕಾಲ ಸುಭಿಕ್ಷೆಯಿಂದ ಕೂಡಿರುತ್ತದೆ. ೨೫ ವರ್ಷದಿಂದ ಗ್ರಾಮದ ಭಜನಾ ಕಲಾವಿದರು ಒಂದು ತಿಂಗಳ ಕಾಲ ಭಜನೆ ಮಾಡುವ ಮೂಲಕ ದೇವರ ಆರಾಧನೆ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಶ್ರೀ ನೀಲಕಂಠಸ್ವಾಮಿ ವಿರಕ್ತಮಠ, ಶ್ರೀ ವೀರಣ್ಣ ಮುತ್ಯಾ ಜಂಬಗಿ, ರಾಜಾ ವೆಂಕಟಪ್ಪನಾಯಕ ಜಹಾಗೀರದಾರ, ಎಂ.ಕೆ.ಸಿದ್ದಣ್ಣ, ರಂಗನಾಥ ದೋರಿ, ಶಾಮಸುಂದರ ಜ್ಯೋಶಿ, ಕನಕು ಜೀರಾಳ, ಬಸವರಾಜ ಅಂಗಡಿ, ವೀರಸಂಗಪ್ಪ ಹಾವೇರಿ, ಸೋಮಲಿಂಗಪ್ಪ ದೊರಿ, ಗ್ರಾಪಂ ಅಧ್ಯಕ್ಷ ಶಿವಶರಣ ಕುಂಬಾರ, ರವಿಂದ್ರ ಅಂಗಡಿ, ವಿರೇಶ ದೊರಿ, ಬಸನಗೌಡ ಮಾಲಿಗೌಡ್ರ, ವಿರಸಂಗಪ್ಪ ಅಂಬ್ಲಿಹಾಳ, ಸಂಗಣ್ಣ ಚಿಮ್ಮಲಗಿ, ಸಂಗಮೇಶ ಅಡ್ಡಿ, ಸಂಗಣ್ಣ, ಪೊಲೀಸ್ ಪಾಟೀಲ್, ಬಸಣ್ಣ, ಸಂಗಪ್ಪ ಲಕ್ಕಿಮಾರ ಭಾಗವಹಿಸಿದ್ದರು. ಒಂದು ತಿಂಗಳ ಕಾಲ ಭಜನೆ ಮಾಡಿದ ವಿವಿಧ ಭಜನಾ ಕಲಾವಿದರನ್ನು ದೇವಸ್ಥಾನ ಸಮಿತಿಯಿಂದ ಸನ್ಮಾನಿಸಲಾಯಿತು.