ಚಾಮರಾಜನಗರ: ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆ ಭರತನಾಟ್ಯ ಕಲಿಯುವ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ನಂಜನಗೂಡಿನ ಶಿವ ನೃತ್ಯ ಅಕಾಡೆಮಿ ವಿದುಷಿ ರಂಜಿತಾ ಸೋಮಶೇಖರ್ ತಿಳಿಸಿದರು.
ನಗರ ಶ್ರೀ ಚಾಮರಾಜೇಶ್ವರ ದೇವಸ್ಥಾನ ಮುಂಭಾಗದಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾ ವತಿಯಿಂದ ಮಂಗಳವಾರ ರಾತ್ರಿ ಆಯೋಜಿಸಿದ್ದ ದಸರಾ ವೈಭವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು. ನವರಾತ್ರಿ ಹಬ್ಬದ 9 ದಿನಗಳ ಕಾಲ ದಿನನಿತ್ಯ ದೇವಸ್ಥಾನಗಳಿಗೆ ಭೇಟಿ ನೀಡಿದರೆ ಮನಸ್ಸಿಗೆ ನೆಮ್ಮದಿ ಜ್ಞಾನ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು. ಅಖಿಲ ಕರ್ನಾಟಕ ಕನ್ನಡ ಮಹಾಸಭಾ ಅಧ್ಯಕ್ಷ ಚಾ.ರಂ.ಶ್ರೀನಿವಾಸ ಗೌಡ, ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ಅಧ್ಯಕ್ಷ ಜಿ ಬಂಗಾರು, ರಾಜು, ಶ್ರೀನಿಧಿ ಕುದುರೆ, ರವಿಚಂದ್ರ ಪ್ರಸಾದ್, ಜಮುನಾ, ಪ್ರಿಯಾಂಕಾ, ಪುಷ್ಪಲತಾ, ಸರ್ವಮಂಗಳಾ, ಕವನಶ್ರೀ, ಲಿಖಿತಾ, ನೀತು, ಲಕ್ಷ್ಮೀ ಇತರರು ಹಾಜರಿದ್ದರು.