ಕುಕನೂರು (ಕೊಪ್ಪಳ): ಪಟ್ಟಣದ ತಹಸೀಲ್ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ಹಿತ ರಕ್ಷಣಾ ವೇದಿಕೆ ಕಾರ್ಯಕರ್ತರು ತಹಸೀಲ್ದಾರ್ ಎಚ್.ಪ್ರಾಣೇಶ್‌ಗೆ ಮಂಗಳವಾರ ಮನವಿ ಸಲ್ಲಿಸಿದರು.
ತಹಸೀಲ್ದಾರ್ ಕಾರ್ಯಲಯದಲ್ಲಿ ಅನಧಿಕೃತ ವ್ಯಕ್ತಿಗಳನ್ನು ಹೊರಹಾಕಬೇಕು. ದಿನ ನಿತ್ಯ ಸಾವಿರಾರು ಜನ ವಿವಿಧ ಕಾರ್ಯಗಳಿಗೆ ಬರುತ್ತಾರೆ. ಅದರಲ್ಲೂ ಗ್ರಾಮೀಣ ಪ್ರದೇಶದಿಂದ ಬರುವ ಅಮಾಯಕ ಜನರಿಂದ ವಿವಿಧ ಕೆಲಸಗಳಿಗೆ ಮಧ್ಯವರ್ತಿಗಳು ಹಣ ಪಿಕುತಿದ್ದಾರೆ. ಜಾತಿ ಆದಾಯ, ಹೈ-ಕರ್ನಾಟಕ 371 ಜೆ, ವಂಶವಳಿ, ವೃದ್ಯಾಪ್ಯ ಸೇರಿದಂತೆ ಇತರೆ ಕೆಲಸ ಮಾಡಿಸುವಂತೆ ಮಧ್ಯವರ್ತಿಗಳು ಹಣ ಪಡೆದುಕೊಳ್ಳುತ್ತಿದ್ದಾರೆ.
ಕಾರ್ಯಲಯದಲ್ಲಿ ನಿಮ್ಮ ಸಿಬ್ಬಂದಿಗಳು ಐಡಿ ಕಾರ್ಡ್ ಹಾಕದೆ ಕೆಲಸ ಮಾಡುವುದರಿಂದ ಸಿಬ್ಬಂದಿ ಯಾರು ಮಧ್ಯವರ್ತಿಗಳು ಯಾರು ಎಂಬುದೇ ತಿಳಿಯದಾಗಿದೆ, ಕೂಡಲೇ ಇದರ ಕುರಿತು ಶಿಸ್ತು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ವೇದಿಕೆ ಗೌರವಾಧ್ಯಕ್ಷ ರಾಮಣ್ಣ ಭಜಂತ್ರಿ, ವೇದಿಕೆ ಜಿಲ್ಲಾಧ್ಯಕ್ಷ ಕೃಷ್ಣ ಗಾವರಳ, ಕಾರ್ಯಕರ್ತರಾದ ಶ್ರೀಕಾಂತ್ ಛಲವಾದಿ, ಶಿವಣ್ಣ ಆದಿ, ಕಳಕಪ್ಪ ಪಲ್ಲೆದ, ಪರುಶುರಾಮ ಕಳ್ಳಿಮನಿ, ಕಾಲೇಶ ಪತ್ತಾರ, ಶರಣಪ್ಪ ರಾಜೂರ ಇತರರಿದ್ದರು.