ಜಿಲ್ಲೆ

ಮಧುಮೇಹ ಮಕ್ಕಳ ಉಚಿತ ತಪಾಸಣೆ

ಕಲಬುರಗಿ: ನಗರದ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಮಕ್ಕಳ ದಿನ ಹಾಗೂ ವಿಶ್ವ ಮಧು ಮೇಹ ದಿನದ ನಿಮಿತ್ತ ಮಧುಮೇಹದಿಂದ ಬಳಲುತ್ತಿರುವ ಮಕ್ಕಳಿಗಾಗಿ ಗುರುವಾರ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಯಿತು.

ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ.ರೂಪಾ ಮಂಗಶೆಟ್ಟಿ ನೇತೃತ್ವದಲ್ಲಿ ಮಕ್ಕಳ ತಜ್ಞರಾದ ಡಾ.ಬಸವರಾಜ ಪಾಟೀಲ್, ಡಾ.ಕಿರಣ ಹೊಸಗೌಡ, ಡಾ.ಅಪೂರ್ವ ಎ.ಬಿ, ಡಾ.ಮೀನಾಕ್ಷಿ ವಡ್ಡಣಕೇರಿ, ಡಾ.ರೋಹಿಣಿ, ಡಾ.ರುದ್ರಾಕ್ಷಿ ಇಟಗಿ, ಡಾ.ಶರಣಕುಮಾರ.ಕೆ, ಡಾ.ಶಿವಕುಮಾರ ಸಂಗೋಳಗಿ ಉಚಿತ ತಪಾಸಣೆ ನಡೆಸಿ, ಸಲಹೆ, ಚಿಕಿತ್ಸೆ ನೀಡಿದರು.

ಮಹಾದೇವಪ್ಪ ವೈದ್ಯಕೀಯ ಮಹಾವಿದ್ಯಾಲಯದ ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿಗಳು ಮಕ್ಕಳ ಪೌಷ್ಟಿಕ ಆಹಾರ, ಮಧುಮೇಹ ಕಾಯಿಲೆಯ ಸ್ವರೂಪ, ಪರಿಣಾಮ ಮತ್ತು ನಿರ್ವಹಣೆಯ, ಆಹಾರ ಕ್ರಮದ ಬಗ್ಗೆ ರೋಗಿಗಳು ಮತ್ತು ಪಾಲಕರೊಂದಿಗೆ , ಇತರರಿಗೆ ಆಪ್ತ ಸಮಾಲೋಚನೆ ನಡೆಸಿದರು.

ಕಲಬುರಗಿ ಜಿ¯್ಲೆಯ ಹಾಗೂ ಗ್ರಾಮಾಂತರ ಪ್ರದೇಶದ ಮಧುಮೇಹ ಪೀಡಿತ ಮಕ್ಕಳು ಉಚಿತ ಆರೋಗ್ಯ ಶಿಬಿರದ ಸದುಪಯೋಗ ಪಡೆದು ಕೊಂಡರು. ಬಸವೇಶ್ವರ ಆಸ್ಪತ್ರೆ ಸಂವಹನಾಧಿಕಾರಿ ಡಾ.ಕಿರಣ ದೇಶಮುಖ, ಡೀನ್ ಡಾ.ಶರಣಗೌಡ ಪಾಟೀಲ್, ಉಪಡೀನ್ ಡಾ.ವಿಜಯಕುಮಾರ ಕಪ್ಪಿಕೇರಿ, ವೈದ್ಯಕೀಯ ಅಧೀಕ್ಷಕ ಡಾ.ಆನಂದ ಗಾರಂಪಳ್ಳಿ, ಶಿಬಿರದ ಸಂಯೋಜಕಿ ಪ್ರಿಯದರ್ಶಿನಿ ಟೆಂಗಳಿ ಇತರರಿದ್ದರು.