ಜಿಲ್ಲೆ

ಮಧುಗಿರಿ ಡಿವೈಎಸ್ಪಿ ಮತ್ತೆ ಜೈಲಿಗೆ

ಮಧುಗಿರಿ: ದೂರು ನೀಡಲು ಬಂದಿದ್ದ ಮಹಿಳೆಯನ್ನು ಪುಸಲಾಯಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದಡಿ ಜೈಲು ಸೇರಿ, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಡಿವೈಎಸ್​ಪಿ ಎ.ರಾಮಚಂದ್ರಪ್ಪ ಮತ್ತೊಂದು ಪ್ರಕರಣದಲ್ಲಿ ಮತ್ತೆ ಜೈಲು ಸೇರಿದ್ದಾರೆ. ಜಮೀನು ವ್ಯಾಜ್ಯ ಸಂಬಂಧ ದೂರು ನೀಡಲು ಡಿವೈಎಸ್​ಪಿ ಕಚೇರಿಗೆ ಬಂದಿದ್ದ ಪಾವಗಡ ಮೂಲದ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಜೈಲು ಸೇರಿದ್ದರು. 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗುರುವಾರ ಜಾಮೀನು ಮಂಜೂರು ಮಾಡಿ, ಬಿಡುಗಡೆ ಮಾಡಿತ್ತು. ಆದರೆ ಶನಿವಾರ ಮತ್ತೊಬ್ಬ ಮಹಿಳೆ ಡಿವೈಎಸ್ಪಿ ವಿರುದ್ಧ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಿಸಿದ್ದು, ಡಿವೈಎಸ್​ಪಿ ರಾಮಚಂದ್ರ ಅವರನ್ನು ಮಧುಗಿರಿ ಪೊಲೀಸರು ಮತ್ತೆ ಬಂಧಿಸಿ ತುಮಕೂರು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದಾಗ 14 ದಿನಗಳವರೆಗೆ ನ್ಯಾಯಾಂಗ ಬಂಧನವನ್ನು ನ್ಯಾಯಧೀಶರು ಆದೇಶಿಸಿದ್ದಾರೆ.