ಜಿಲ್ಲೆ

ಮಧು ಬಂಗಾರಪ್ಪ ಗೆಲುವಿಗೆ ಒಟ್ಟಿಗೆ ಶ್ರಮಿಸೋಣ

ಸೊರಬ: ಹಿಂದಿನ ಚುನಾವಣೆಯಲ್ಲಿ ಅತಿಯಾದ ಆತ್ಮವಿಶ್ವಾಸವೇ ಮುಳುವಾಯಿತು, ಮಧು ಬಂಗಾರಪ್ಪ ಅವರ ಸೋಲಿಗೆ ಕಾರಣವಾಯಿತು. ಆದಕಾರಣ ಆ ತಪ್ಪು ಮರುಕಳಿಸದಂತೆ ನೋಡಿಕೊಳ್ಳೋಣ ಎಂದು ತಾಪಂ ಮಾಜಿ ಅಧ್ಯಕ್ಷ ಗಣಪತಿ ಹೇಳಿದರು.

ಭಾನುವಾರ ತಾಲೂಕಿನ ಹುಲ್ತಿಕೊಪ್ಪ ಗ್ರಾಮದಲ್ಲಿ ಕಾಂಗ್ರೆಸ್ ಬೂತ್ ಮಟ್ಟದ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಮತ್ತು ಮುಖಂಡರನ್ನು ಉದ್ದೇಶಿಸಿ ಮಾತನಾಡಿ, ಮಧು ಬಂಗಾರಪ್ಪ ಗೆಲುವಿಗೆ ಎಲ್ಲರೂ ಒಟ್ಟಾಗಿ ಶ್ರಮಿಸಬೇಕು ಎಂದರು.

ತಾಲೂಕಿಗೆ ಬಂಗಾರಪ್ಪ ಅವರ ಕೊಡುಗೆ ಹಾಗೂ ಕಾಂಗ್ರೆಸ್ ಕೊಡುಗೆ ಅಪಾರ. ಅವರ ಕಾರ್ಯಕ್ರಮಗಳನ್ನು ಪ್ರತಿ ಮನೆಗೆ ತಿಳಿಸಬೇಕು. ತಾಲೂಕಿನ ಬಗರ್‍ಹುಕುಂ ರೈತರನ್ನು ಒಕ್ಕಲೆಬ್ಬಿಸುವ ಮತ್ತು ತಾಲೂಕಿನಲ್ಲಿ ನಡೆದ ಕಳಪೆ ಕಾಮಗಾರಿ, ಶಾಸಕರ ದುರಾಡಳಿತವನ್ನು ಜನತೆಗೆ ತಿಳಿಸಬೇಕು ಎಂದರು.

ಎಪಿಎಂಸಿ ಮಾಜಿ ಉಪಾಧ್ಯಕ್ಷ ಅಂಕರವಳ್ಳಿ ಜಯಶೀಲ ಗೌಡ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಒಗ್ಗೂಡಿ ಕೆಲಸ ಮಾಡಬೇಕು. ಬಿಜೆಪಿ ದುರಾಡಳಿತ ಕೊನೆಗಾಣಿಸಬೇಕು ಎಂದು ಹೇಳಿದರು.

ಗ್ರಾಪಂ ಮಾಜಿ ಅಧ್ಯಕ್ಷ ಪುರುಷೋತ್ತಮ್, ಮಾಜಿ ಸದಸ್ಯ ಕಾಳಪ್ಪ, ಎಚ್.ಶೇಷಪ್ಪ, ವೀರಭದ್ರಪ್ಪ, ಎಚ್.ಚಂದ್ರಪ್ಪ, ದೇವರಾಜ ಕೋಣನಮನೆ, ಹೊಳೆಯಪ್ಪ, ದಾನಶೇಖರ್ ಕೋಣನಮನೆ ಇದ್ದರು.