ಶಿಕಾರಿಪುರ: ಮದ್ಯಪಾನ ಮೃತ್ಯುವಿಗೆ ಆಹ್ವಾನವಿದ್ದಂತೆ. ನಮ್ಮ ಸಮಾಜ ದುಶ್ಚಟಗಳಿಂದ ಮುಕ್ತವಾಗಬೇಕು. ಯುವಕ ಯುವತಿಯರು ಇದರಿಂದ ಹೊರಬರಬೇಕು ಎಂದು ಪುರಸಭೆ ಅಧ್ಯಕ್ಷೆ ಸುನಂದಾ ಮಂಜುನಾಥ್ ಹೇಳಿದರು.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಶಿಕಾರಿಪುರ ವಲಯ ಮದ್ಯವರ್ಜನ ವ್ಯವಸ್ಥಾಪನಾ ಸಮಿತಿ ಹಾಗೂ ಬಿಸಿ ಟ್ರಸ್ಟ್‌ನಿಂದ ಏರ್ಪಡಿಸಿದ್ದ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಮದ್ಯಪಾನ ಸಮಾಜಕ್ಕೆ ಅಂಟಿದ ವ್ಯಾ. ಇದನ್ನು ಬುಡಸಮೇತ ಕಿತ್ತೆಸೆಯುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಳಕಳಿ ಶ್ಲಾಘನೀಯ ಎಂದರು.
ಧರ್ಮಸ್ಥಳ ಯೋಜನೆಯ ಶಿರಸಿ ಜಿಲ್ಲಾ ನಿರ್ದೇಶಕ ಎಂ.ದಿನೇಶ್ ಮಾತನಾಡಿ, ಅಮೂಲ್ಯವಾದ ಈ ದೇಹವನ್ನು ಅತಿ ಜಾಗರೂಕ, ಆರೋಗ್ಯವಾಗಿ ಇಟ್ಟುಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.
ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ನಿರ್ದೇಶಕ ಎನ್.ವಿ.ಈರೇಶ್, ಡಿಎಸ್‌ಎಸ್ ತಾಲೂಕು ಸಂಚಾಲಕ ಜಗದೀಶ್, ಮಲ್ಲಿಕಾರ್ಜುನ ಆಚಾರ್, ಗೌರಿ ನಾಯಕ್, ಹನುಮಂತಪ್ಪ, ಪ್ರೇಮ್‌ಕುಮಾರ್ ಗೌಡ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಲ್.ರಾಜು, ಎಸ್.ಬಿ.ಪ್ರೇಮಾ, ಸುನೀತಾ ಅರವಿಂದ, ಎಂ.ಎಚ್.ರೇಖಾ, ಚಂದ್ರಶೇಖರ್, ಚನ್ನವೀರ ಶೆಟ್ಟರು ಇತರರಿದ್ದರು.