ಶಿವರಾಜ ಎಂ.ಬೆಂಗಳೂರು: ಇಂದಿನಿಂದ ವೈನ್‌ಶಾಪ್‌ಗಳನ್ನು ತೆರೆಯುವಂತೆ ಸರ್ಕಾರ ಆದೇಶ ಹೊರಡಿಸಿದೆ, ಕೇವಲ 2 ಗಂಟೆ ಮದ್ಯದಂಗಡಿ ತೆರೆದಿರುತ್ತವೆ. ಪ್ರತಿ ಮದ್ಯದಂಗಡಿ ಬಳಿ ಅಬಕಾರಿ ಸಿಬ್ಬಂದಿ ನಿಯೋಜಿಸಲಾಗಿದೆ. ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ಮದ್ಯ ಖರೀದಿಸಬಹುದು...!
ಇಂಥಹದ್ದೊಂದು ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮದ್ಯಪ್ರಿಯರು ಭಾನುವಾರ ಮುಂಜಾನೆಯಿಂದಲೇ ಮದ್ಯದಂಗಡಿಗಳತ್ತ ಪ್ರದಕ್ಷಿಣೆ ಹಾಕುತ್ತಿರುವ ದೃಶ್ಯ ಕಂಡುಬಂದಿದೆ. ಇದ್ದಕ್ಕಿದ್ದಂತೆ ಮದ್ಯದಂಡಿಗಳತ್ತ ಸಾರ್ವಜನಿಕರ ಓಡಾಟ ಗಮನಿಸಿದ ಪೊಲೀಸರಿಗೂ ಆಶ್ಚರ್ಯ ಕಾದಿತ್ತು. ಇಂದಿನಿಂದಲೇ ಮದ್ಯದಂಡಿಗಳು ಓಪನ್ ಅಂತೆ ಎಂಬ ಗುಸುಗುಸು ಆರಂಭವಾಗಿತ್ತು, ಒಬ್ಬರಿಂದ ಒಬ್ಬರಿಗೆ ಮಾಹಿತಿ ಾವರ್ಡ್ ಆಗುವುದರ ಜತೆಗೆ ಇದು ನಿಜಾನಾ ಎಂಬ ಪ್ರಶ್ನಾರ್ಥಕ ಚಿಹ್ನೆಯೊಂದಿಗೆ ಮದ್ಯಪ್ರಿಯರು ಪರದಾಡುತ್ತಿದ್ದ ದೃಶ್ಯ ಕಂಡುಬಂತು.
ಗೌರ‌್ನಮೆಂಟ್ ಆ್ ತೆಲಂಗಾಣ!: ಗೌರ‌್ನಮೆಂಟ್ ಆ್ ತೆಲಂಗಾಣ ಎಂಬ ಮುದ್ರೆಯಿದ್ದು, ಕೆಳಭಾಗದಲ್ಲಿ ಗೌರ‌್ನಮೆಂಟ್ ಆ್ ಕರ್ನಾಟಕ ಎಂಬ ದಪ್ಪ ಅಕ್ಷರಗಳಲ್ಲಿ ಮುದ್ರಿತವಾಗಿರುವ ಸರ್ಕಾರಿ ಆದೇಶದಂತಿರುವ ಪತ್ರವೊಂದು ಜಾಲತಾಣದಲ್ಲಿ ಹರಿದಾಡುತ್ತಿದೆ. ಏಕಾಏಕಿ ಲಾಕ್‌ಡೌನ್‌ನಿಂದ ಕಂಗಾಲಾಗಿರುವ ಮದ್ಯಪ್ರಿಯರು ಮತ್ತೆ ಮದ್ಯದಂಗಡಿ ಆರಂಭವಾಗುತ್ತದೆ ಎಂಬ ಖುಷಿಯಲ್ಲಿ ತೇಲಾಡುತ್ತಿದ್ದರೂ, ಕಡೆಗೆ ಇದೊಂದು ೇಕ್ ಸುದ್ದಿ ಎಂಬುದು ತಿಳಿಯುತ್ತಿದ್ದಂತೆ ಸಪ್ಪೆ ಮೊರೆ ಹಾಕಿಕೊಂಡು ಹಿಂತಿರುಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಕಳ್ಳಮಾರ್ಗದಲ್ಲಿ ಮದ್ಯಮಾರಾಟ: ಜಿಲ್ಲೆಯಲ್ಲಿ ಎಲ್ಲ ಮದ್ಯದಂಗಡಿಗಳನ್ನು ಮುಚ್ಚಿಸಲಾಗಿದೆ. ಆದರೆ ಕೆಲವೊಂದು ಗ್ರಾಮಗಳ ಗೂಡಂಗಡಿಗಳಲ್ಲಿ ಶೇಖರಿಸಿಟ್ಟಿದ್ದ ಮದ್ಯದ ಬಾಟಲಿಗಳಿಗೆ ಡಿಮಾಂಡ್ ಶುರುವಾಗಿದೆ. ಮದ್ಯದ ದರಕ್ಕಿಂತ ನಾಲ್ಕೈದು ಪಟ್ಟು ಹೆಚ್ಚಿನ ದರದಲ್ಲಿ ಮದ್ಯ ಮಾರಾಟವಾಗುತ್ತಿವೆ. ಪೊಲೀಸರ ಕಣ್ತಪ್ಪಿಸಿ ಕಳ್ಳ ಮಾರ್ಗದಲ್ಲಿ ಮದ್ಯಮಾರಾಟ ನಡೆಯುತ್ತಿದ್ದು, ಮದ್ಯ ಮಾರಾಟಗಾರರು ಪರಿಸ್ಥಿತಿಯ ಲಾಭ ಪಡೆಯುತ್ತಿದ್ದಾರೆ.
ಇದೊಂದು ವದಂತಿ, ಸರ್ಕಾರದಿಂದ ಇಂಥ ಯಾವುದೇ ಆದೇಶ ಬಂದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಯಾವ ವದಂತಿಗಳಿಗೂ ಕಿವಿಕೊಡಬಾರದು. ಮಾರಣಾಂತಿಕ ಕರೊನಾ ತಡೆಗೆ ಜಿಲ್ಲೆಯ ಜನರು ಸಹಕಾರ ನೀಡಬೇಕು. ಪಿ.ಎನ್.ರವೀಂದ್ರ ಜಿಲ್ಲಾಧಿಕಾರಿ ತೆಲಂಗಾಣದ ಸರ್ಕಾರಿ ಚಿಹ್ನೆಯಿದ್ದು, ಕೆಳಭಾಗದಲ್ಲಿ ಕರ್ನಾಟಕ ಸರ್ಕಾರ ಎಂಬ ಹೆಸರಿನಲ್ಲಿ ಯಾರೂ ಕಿಡಿಗೇಡಿಗಳು ೇಕ್ ಸಂದೇಶ ಹರಿಬಿಟ್ಟಿದ್ದಾರೆ. ಇಂಥ ಯಾವುದೇ ಆದೇಶವಿಲ್ಲ. ಸರ್ಕಾರದ ಮುಂದಿನ ಆದೇಶದವರೆಗೆ ಮದ್ಯದಂಗಡಿ ಆರಂಭವಾಗುವುದಿಲ್ಲ. ರವೀಂದ್ರ, ಅಬಕಾರಿ ಉಪ ಆಯಕ್ತ ಗ್ರಾಮಾಂತರ ಜಿಲ್ಲೆ