ಮಟ್ಕಾ, ಮದ್ಯ ನಿಷೇಧಿಸುವಂತೆ ಒತ್ತಾಯಿಸಿದ ಶ್ರೀರಾಮ ಸೇನೆ ಬಾವನ ಸೌಂದತ್ತಿ ಗ್ರಾಪಂ ಅಧ್ಯ ರಾಮು ಕಾಟೆಗೆ ಮನವಿ ಸಲ್ಲಿಸಿತು. ಅಯ ಚಂಪು, ಸಾಗರ ಭೂವಿ, ಸುನೀಲ ಕೊರವಿ, ಶುಭಂ ಖಾಮಗೋಳ ಇತರರಿದ್ದರು. 
ಜಿಲ್ಲೆ

ಮದ್ಯ ನಿಷೇಧಿಸುವಂತೆ ಆಗ್ರಹ

ಮಾಂಜರಿ: ಸಮೀಪದ ಬಾವನ ಸೌಂದತ್ತಿ ಗ್ರಾಮದಲ್ಲಿ ಅಕ್ರಮ ಮಟ್ಕಾ ಹಾಗೂ ಮದ್ಯ ನಿಷೇಧಿಸುವಂತೆ ಒತ್ತಾಯಿಸಿ ಶ್ರೀರಾಮಸೇನೆ ವತಿಯಿಂದ ಪ್ರತಿಭಟನೆ ನಡೆಸಿ ಪಿಡಿಒ ಹಾಗೂ ಅಧ್ಯರಿಗೆ ಮನವಿ ಸಲ್ಲಿಸಲಾಯಿತು.

ಗ್ರಾಮದಲ್ಲಿ ಅಕ್ರಮ ಮಟ್ಕಾ ಮತ್ತು ಮದ್ಯ ಮಾರಾಟ ಮಾಡಲಾಗುತ್ತಿದೆ. ಇದನ್ನು ಸಂಪೂರ್ಣ ನಿಷೇಧಿಸದೆ ಹೋದರೆ ಶ್ರೀರಾಮಸೇನೆ, ಗ್ರಾಮಸ್ಥರಿಂದ ಮತ್ತೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಗ್ರಾಮಸ್ಥರಾದ ಅಯ ಚಂಪು, ಸಾಗರ ಭೂವಿ, ಸುನೀಲ ಕೊರವಿ, ಶುಭಂ ಖಾಮಗೋಳ, ಶಿವು ಚಂಪು, ಅಜಿತ ಚಂಪು, ಶಿವರಾಮ ಗಲಗಲೆ, ನಿಖಿಲ ಚಂಪು, ಸೌರಭ, ಮಿಥುನ ಪಾಟೀಲ, ಸುದೀಪ ದೇಸಾಯಿ ಇತರರಿದ್ದರು. ಅಕ್ರಮ ಮಟ್ಕಾ, ಮದ್ಯ ಮಾರಾಟ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಪಂ ಅಧ್ಯ ರಾಮು ಕಾಟೆ ಪ್ರತಿಭಟನಾಕಾರರಿಗೆ ತಿಳಿಸಿದರು.