ಜಿಲ್ಲೆ

ಮದ್ಯ ನಿಷೇಧಕ್ಕೆ ಬ್ರಾಹ್ಮಣ ಸಂಘ ಆಗ್ರಹ

ಹುಬ್ಬಳ್ಳಿ: ಕರೊನಾ ಸೋಂಕು ಹರಡುವುದನ್ನು ತಡೆಯುವುದಕ್ಕಾಗಿ ಲಾಕ್​ಡೌನ್ ಜಾರಿಗೊಳಿಸಿರುವ ಈ ದಿನಗಳಲ್ಲಿ ಮದ್ಯ ಮಾರಾಟ ಮಾಡಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಕಳವಳ ವ್ಯಕ್ತಪಡಿಸಿರುವ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ, ಮದ್ಯ ಮಾರಾಟ ನಿಷೇಧಿಸುವಂತೆ ಮುಖ್ಯಮಂತ್ರಿಗೆ ಪತ್ರ ಬರೆದಿದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಸಂಘದ ರಾಜ್ಯ ಕಾರ್ಯದರ್ಶಿ ಗೋಪಾಲ ಕುಲಕರ್ಣಿ ಹಾಗೂ ಜಿಲ್ಲಾಧ್ಯಕ್ಷ ಕೆ.ಎನ್. ಪುರೋಹಿತ, ಲಾಕ್​ಡೌನ್​ನಿಂದಾಗಿ ಮದ್ಯ ನಿಷೇಧಿಸಿದ್ದರಿಂದ ಅನೇಕ ಕುಟುಂಬಗಳಲ್ಲಿ ಜಗಳ ನಿಂತಿತ್ತು. ಕುಟುಂಬದ ಸದಸ್ಯರು ಪ್ರೀತಿ, ಹೊಂದಾಣಿಕೆಯಿಂದ ಬಾಳುತ್ತಿದ್ದರು ಎಂದು ತಿಳಿಸಿದ್ದಾರೆ.

ಮದ್ಯ ಮಾರಾಟದಿಂದಲೇ ರಾಜ್ಯ ಸರ್ಕಾರ ಆದಾಯ ಪಡೆಯಬೇಕೆಂದೇನೂ ಇಲ್ಲ. ಆಡಳಿತ ನಿರ್ವಹಣೆಗಾಗಿ ಸಿರಿವಂತರಿಗೆ ಕರೊನಾ ತೆರಿಗೆ ಹಾಕಬಹುದು. ಮುಜರಾಯಿ ದೇವಸ್ಥಾನಗಳ ಹಣ, ಚಿನ್ನ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಹಸೀಲ್ದಾರ್ ಕಚೇರಿ ಅಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು. ಡಾ. ಪವನ ಜೋಶಿ, ರಮೇಶ ಕುಲಕರ್ಣಿ, ವಾದಿರಾಜ ಕುಲಕರ್ಣಿ, ಆನಂದ ಅಣ್ವೇಕರ ಹಾಜರಿದ್ದರು.