ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವ್ಯಕ್ತಿಯನ್ನು ಅಬಕಾರಿ ಪೊಲೀಸರು ಬಂಧಿಸಿದ್ದು, ಸಾಗಣೆಗೆ ಬಳಸಿದ್ದ ಲಾರಿ ಹಾಗೂ ಮದ್ಯದ ಬಾಕ್ಸ್ ವಶಪಡಿಸಿಕೊಂಡಿದ್ದಾರೆ. ಅಬಕಾರಿ ಉಪ ಆಯುಕ್ತ ಜಯರಾಮೇಗೌಡ, ಉಪ ಅಧೀಕ್ಷಕ ಆರ್.ಎಂ. ಮುರಗೋಡ, ಅಬಕಾರಿ ನಿರೀಕ್ಷಕಿ ಸರಸ್ವತಿ ಪಾಟೀಲ, ಉಪ ನಿರೀಕ್ಷಕ ಎಸ್.ಚಾಲುಕ್ಯ ಹಾಗೂ ಮಹಿಳಾ ಸಿಬ್ಬಂದಿ ಇದ್ದರು. 
ಜಿಲ್ಲೆ

ಮದ್ಯ ಅಕ್ರಮ ಸಾಗಣೆ, ಓರ್ವನ ಬಂಧನ


ಬೆಳಗಾವಿ: ಗೋವಾ ರಾಜ್ಯದಿಂದ ಅಕ್ರಮವಾಗಿ ಮದ್ಯ ಸಾಗಣೆ ಮಾಡುತ್ತಿದ್ದ ವಾಹನದ ಮೇಲೆ ಅಬಕಾರಿ ಪೊಲೀಸರು ಗುರುವಾರ ದಾಳಿ ನಡೆಸಿ ಓರ್ವನನ್ನ ಬಂಧಿಸಿದ್ದು, ಅಂದಾಜು 1 ಲಕ್ಷ ರೂ. ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದಾರೆ. ಬೆಳಗಾವಿ ನಗರದ ಬಾಲಕೃಷ್ಣ ಅತುಲ್‌ವಾಡಕರ್ (47) ಬಂಧಿತ ವ್ಯಕ್ತಿ.

ಗೋವಾದಿಂದ ಜಿಲ್ಲೆಗೆ ಟ್ರಕ್‌ನಲ್ಲಿ ಮದ್ಯ ಸಾಗಿಸುತ್ತಿದ್ದ ವೇಳೆ ಖಾನಾಪುರ ತಾಲೂಕಿನ ಕಣಕುಂಬಿ ಸಮೀಪದ ಚೆಕ್‌ಪೋಸ್ಟ್‌ನಲ್ಲಿ ತಡೆದ ಸಿಬ್ಬಂದಿ, ತಪಾಸಣೆ ನಡೆಸಿದಾಗ ವಿವಿಧ ಕಂಪನಿಗಳ 30 ಮದ್ಯದ ಬಾಕ್ಸ್ ಪತ್ತೆಯಾಗಿವೆ.

ಬಾಕ್ಸ್‌ನಲ್ಲಿ 270 ಲೀಟರ್ ಮದ್ಯವಿತ್ತು. 6 ಲಕ್ಷ ರೂ. ಮೌಲ್ಯದ ವಾಹನ ಜಪ್ತಿ ಮಾಡಿಕೊಂಡಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಬಕಾರಿ ಅಪರ ಆಯುಕ್ತ ಡಾ. ಎಸ್.ಕೆ. ಕುಮಾರ ತಿಳಿಸಿದ್ದಾರೆ. ಅಬಕಾರಿ ಉಪ ಆಯುಕ್ತ ಜಯರಾಮೇಗೌಡ, ಉಪ ಅಧೀಕ್ಷಕ ಆರ್.ಎಂ.ಮುರಗೋಡ ಮಾರ್ಗದರ್ಶನದಲ್ಲಿ ಅಬಕಾರಿ ನಿರೀಕ್ಷಕಿ ಸರಸ್ವತಿ ಪಾಟೀಲ, ಉಪ ನಿರೀಕ್ಷಕ ಎಸ್.ಚಾಲುಕ್ಯ, ಮಹಾದೇವ ಕಣಗಣ್ಣವರ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದರು.