ಕುಣಿಗಲ್: ತಾಲೂಕಿನ ಅಮೃತೂರು ಠಾಣೆ ಮಹಿಳಾ ಪೊಲೀಸ್ ಪೇದೆಯನ್ನು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಅದೇ ಠಾಣೆಯ ಕಾನ್ಸ್ಟೆಬಲ್ ವಿರುದ್ಧ ಪ್ರಕರಣ ದಾಖಲಾಗಿದೆ. ಮೂಲತ@ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕು ಮನಾಪುರ ಗ್ರಾಮದ ಭಗವಂತರಾಯ ಬಿರಾದಾರ (34) ಆರೋಪಿ. ಪ್ರೀತಿಯ ನಾಟಕವಾಡಿ ದೈಹಿಕವಾಗಿ ಬಳಸಿಕೊಂಡಿದ್ದರು ಎಂಬ ಆರೋಪ ಹೊತ್ತಿರುವ ಭಗವಂತರಾಯ ಬಿರಾದಾರ ಮತ್ತೊಂದು ಹುಡುಗಿಯೊಂದಿಗೆ ನಿಶ್ಚಿದಾರ್ಥ ಮಾಡಿಕೊಂಡಿರುವ ವಿಚಾರ ತಿಳಿದ ಮಹಿಳಾ ಕಾನ್ಸ್ಟೇಬಲ್ ದೂರು ದಾಖಲಿಸಿದ್ದಾರೆ. ಆರೋಪಿತನ ಪರವಾಗಿ ಮಾತನಾಡಿದರು ಎಂಬ ಕಾರಣಕ್ಕೆ ಅದೇ ಠಾಣೆಯ ಮತ್ತೊಬ್ಬ ಪೇದೆ ನಾಗಭೂಷಣ್ ವಿರುದ್ಧವೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.