ಮೈಸೂರು: ಪೋಷಕರು ತನಗೆ ಮದುವೆ ಮಾಡುತ್ತಿಲ್ಲ ಎಂಬ ಕಾರಣಕ್ಕೆ ನಗರದಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನಗರದ ಎರೆಕಟ್ಟೆ ಸ್ಟ್ರೀಟ್ ನಿವಾಸಿ ಮಹಮದ್ ಸಲ್ಮಾನ್ (22) ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಯುವಕ.
ಏನಿದು ಘಟನೆ:
ಇತ ತನಗೆ ಮದುವೆ ಮಾಡುವಂತೆ ಅನೇಕ ಬಾರಿ ತನ್ನ ಪಾಲಕರಲ್ಲಿ ಒತ್ತಾಯಿಸಿದ್ದ. ಇವನ ಒತ್ತಾಯಕ್ಕೆ ಬೇಸತ್ತ ಪಾಲಕರು ಹುಡುಗಿಯನ್ನು ನೋಡಲು ಆರಂಭಿಸಿದ್ದರು. ಆದರೆ, ಈ ಮಧ್ಯೆ ಮನಸ್ಸು ಬದಲಾಯಿಸಿದ ಪಾಲಕರು ಸದ್ಯಕ್ಕೆ ಮದುವೆ ಬೇಡ ಇನ್ನೂ ವಯಸ್ಸು ಇದೆ. ಮೊದಲು ಮನೆ ಕಟ್ಟುವ, ಆಮೇಲೆ ಮದುವೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದರಿಂದ ಮನನೊಂದ ಮಹಮದ್ ಸಲ್ಮಾನ್ ಆತ್ಮಹತ್ಯೆ ಶರಣಾಗಿದ್ದಾನೆ. ಈ ಸಂಬಂಧ ನಗರದ ಮಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.