ಅಶೋಕ ಶೆಟ್ಟರ, ಬಾಗಲಕೋಟೆ:
ಇತ್ತೀಚಿಗೆ ಸಣ್ಣ ಸಣ್ಣು ಸಮುದಾಯ, ರೈತರು, ನೇಕಾರ ವೃತ್ತಿ, ಸಣ್ಣ ಪುಟ್ಟ ಕೆಲಸ ಮಾಡುವ ಕಾರ್ಮಿಕರು, ಬಡವರಿಗೆ ಕನ್ಯಾ ಕೊಡಲು ಜನರು ಮುಂದೆ ಬರುತ್ತಿಲ್ಲ. ಹೀಗಾಗಿ ಅದೆಷ್ಟೋ ಯುವಕರು ಮಧ್ಯವಯಸ್ಕರಾದರೂ ಮದುವೆ ಭಾಗ್ಯ ಇಲ್ಲದೇ ಪರಿತಪಿಸುತ್ತಿದ್ದಾರೆ. ಇದನ್ನೆ ಬಂಡವಾಳ ಮಾಡಿಕೊಂಡು ಕೆಲವರು ಮದುವೆ ಹೆಸರಿನಲ್ಲಿ ಮುಗ್ದರಿಂದ ಹಣ ವಸೂಲಿ ಮಾಡಿ ವಂಚಿಸುವ ಕೃತ್ಯಗಳು ನಡೆದಿವೆ.
ಇಂತದ್ದೊAದು ಮೋಸದ ಜಾಲಕ್ಕೆ ಸಿಕ್ಕು ಹಣವನ್ನು ಕಳೆದುಕೊಂಡು, ಮದುವೆಯಾದ ಪತ್ನಿಯೂ ಜೊತೆಗಿರದೇ ಮದುವೆಗಾಗಿ ಮಾಡಿಕೊಂಡ ಸಾಲದ ಸುಳಿಗೆ ಸಿಕ್ಕು ತನ್ನ ಕುಟುಂಬಕ್ಕೆ ಇದ್ದ ಜಮೀನು ಮಾರುವ ಸಂಕಷ್ಟದಲ್ಲಿ ಯುವಕನೊಬ್ಬ ಸಿಲುಕಿರುವುದು ಬೆಳಕಿಗೆ ಬಂದಿದೆ.
ಜಿಲ್ಲೆಯ ಮುಧೋಳ ತಾಲೂಕಿನ ಬಿದರಿ ಗ್ರಾಮದ ಸೋಮಶೇಖರ್ ಗುಲಗಾಲಜಂಬಗಿ ಎನ್ನುವ ಯುವ ರೈತ ಮ್ಯಾರೇಜ್ ಬ್ರೋಕರ್ ಗಳ ವಂಚನೆಯ ಜಾಲಕ್ಕೆ ಸಿಕ್ಕು ನೋವು ಅನುಭವಿಸುತ್ತಿದ್ದಾರೆ. ಹಣದ ಆಸೆಗಾಗಿ ಈಗಾಗಲೇ ಎರಡು ಮದುವೆಯಾಗಿದ್ದ ಮಹಿಳೆಯನ್ನು ಕರೆತಂದು ಮದುವೆ ಮಾಡಿ, ಇದಕ್ಕಾಗಿ ೪.೦೫ ಲಕ್ಷ ರೂ. ವಸೂಲಿ ಮಾಡಿದೆ ಈ ವಂಚಕ ಮ್ಯಾರೇಜ್ ಬ್ರೋಕರ್ ಗಳ ತಂಡ,
ಮದುವೆಯಾಗಿ ಒಂದೇ ತಿಂಗಳಲ್ಲಿ ಪತ್ನಿ ಮನೆಬಿಟ್ಟು ಹೋಗಿದ್ದು, ಪತ್ನಿಯನ್ನು ಹುಡಕಿಕೊಂಡು ಹೋದಾಗ ಆಕೆಗೆ ಈ ಮೊದಲು ಎರಡು ಮದುವೆ ಆಗಿದ್ದು, ಮಕ್ಕಳು ಸಹ ಇದ್ದಾರೆ ಎನ್ನುವುದು ಗೊತ್ತಾಗಿ ಆಕಾಶವೇ ಕಳಚಿ ಬಿದ್ದಂತಾಗಿರುವ ಮುಗ್ದ ಯುವ ರೈತ, ಇತ್ತ ಹಣವೂ ಹೋಯಿತು, ಅತ್ತ ಪತ್ನಿಯೂ ಇಲ್ಲ, ಬ್ರೋಕರ್ ಗಳನ್ನು ನಂಬಿ ಯಾಮಾರಿದೆ ಎಂದು ಅರಿವಿಗೆ ಬಂದು, ಇದೀಗ ನ್ಯಾಯ ಕೊಡೆಸಿ ಎಂದು ತಡವಾಗಿ ಪೊಲೀಸ್ ಠಾಣೆಗೆ ಮೊರೆ ಹೋಗಿದ್ದಾನೆ.
ಈ ಪ್ರಕರಣ ಜಿಲ್ಲೆಯಲ್ಲಿ ಬಯಲಿಗೆ ಬಂದು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿರುವ ಮೊದಲ ಪ್ರಕರಣವಾಗಿದೆ. ಆದರೆ, ಇಂತ ಘಟನೆಗಳು ಜಿಲ್ಲೆ ಮಾತ್ರವಲ್ಲದೇ ಪಕ್ಕದ ಬೆಳಗಾವಿ ಸೇರಿದಂತೆ ರಾಜ್ಯದಲ್ಲಿ ಮುಖ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಈ ಮೋಸದ ಮದುವೆಗಳು ನಡೆಯುತ್ತಲೇ ಇವೆ. ಆದರೆ, ಕುಟುಂಬದ ಮಾನ, ಮರ್ಯಾದೆ, ಗೌರವ ಹಾಳಾಗುತ್ತದೆ ಎನ್ನುವ ಕಾರಣಕ್ಕೆ ಪೊಲೀಸ್ ಠಾಣೆ ಮೆಟ್ಟಿಲು ಹತ್ತಲು ಜನರು ಮುಂದೆ ಬರುವುದಿಲ್ಲ. ಇದು ವಂಚಕರಿಗೆ ಮತ್ತಷ್ಟು ಅನುಕೂಲವಾಗುತ್ತದೆ.
೩೪ ವಯಸ್ಸಿನ ಸೋಮಶೇಖರ್ ನಾಲ್ಕೆÊದು ವರ್ಷಗಳಿಂದ ಮದುವೆ ಆಗಲಿ ಕನ್ಯಾ ಹುಡುಕಾಟದಲ್ಲಿ ಇದ್ದ. ರೈತ ಎನ್ನುವ ಕಾರಣಕ್ಕೆ ಯಾರು ಕನ್ಯಾ ಕೊಡಲು ಮುಂದೆ ಬಂದಿರಲಿಲ್ಲ. ಇತನ ಚಿಕ್ಕಪ್ಪ ಬೆಳಗಾವಿ ಜಿಲ್ಲೆಯ ಕಿನ್ನಾಳ ಗ್ರಾಮದವರು ಇದ್ದು, ಅದೇ ಗ್ರಾಮದಲ್ಲಿ ಸತ್ಯಪ್ಪ ಶಿರೂರ ಎನ್ನುವ ಬ್ರೋಕರ್‌ಗೆ ಕನ್ಯಾ ಇದ್ದರೆ ಹೇಳಿ ಎಂದಿದ್ದರು. ಆರಂಭದಲ್ಲಿ ಒಂದು ಕನ್ಯಾ ತೋರಿಸಿದಂತೆ ಮಾಡಿ, ಬಳಿಕ ತನ್ನ ಸಹಚರರ ಜೊತೆ ಸೇರಿ ನಕಲಿ ಮದುವೆ ಮಾಡಿ ಹಣ ವಸೂಲಿ ಮಾಡುವ ಕೃತ್ಯಕ್ಕೆ ಇಳಿದಿದ್ದಾನೆ. ಆತ ಪ್ಲಾನ್ ಗೆ ಮದುವೆ ಆಗುವ ಮಹಿಳೆ ಸೇರಿ ಇತರೆ ಐವರು ಏಜಂಟರು ಕೈಜೋಡಿಸಿದ್ದರಿಂದ ಲಕ್ಷ ಲಕ್ಷ ಹಣ ವಸೂಲಿ ಮಾಡಿಕೊಂಡು ಈಗಾಗಲೇ ಮದುವೆ ಆಗಿದ್ದ ಮಹಿಳೆಯನ್ನು ಗಂಟು ಹಾಕಿ, ಕೈತೊಳೆದುಕೊಂಡಿದ್ದಾರೆ. ಮದುವೆಯಾದ ಮಹಿಳೆ ಒಂದೇ ತಿಂಗಳಲ್ಲಿ ಗಂಡನ ಮನೆ ತೊರೆದು ತನ್ನೂರಿಗೆ ಹೋಗಿ, ಇತ್ತ ಮುಗ್ದ ರೈತನನ್ನು ಯಾಮಾರಿಸಿದ್ದಾಳೆ.
ಸತ್ಯಪ್ಪ ಮತ್ತು ತಂಡವೂ ಸೇರಿಕೊಂಡು ಶಿವಮೊಗ್ಗದ ಮಂಜುಳಾ ಎನ್ನುವ ಮಹಿಳೆಯ -ೆÇÃಟೋ ತೋರಿಸಿ ಮದುವೆ ಆಗುತ್ತಾಳೆ. ಆದರೆ, ಮದುವೆಗೂ ಮುನ್ನ ೪.೨೫ ಲಕ್ಷ ರೂ. ಕೊಡಬೇಕು ಎನ್ನುವ ಷರತ್ತು ಹಾಕಿದ್ದರು. ಕನ್ಯಾ ಸಿಗದೇ ಸಾಕಾಗಿ ಹೋಗಿದ್ದ ಸೋಮಶೇಖರ ಕುಟುಂಬದವರು ಇದಕ್ಕೆ ಒಪ್ಪಿ ಹಂತ ಹಂತವಾಗಿ ಒಟ್ಟು ೪.೦೫ ಲಕ್ಷ ರೂ. ಹಣವನ್ನು ನೀಡಿದ್ದರು.
೧೦.೧೧.೨೦೨೩ ರಂದು ಮುಧೋಳ ನಗರದ ಕಾಳಿಕಾದೇವಿ ದೇವಸ್ಥಾನದಲ್ಲಿ ಮದುವೆ ಮಾಡಿದರು. ಮದುವೆ ಮಂಜುಳಾ ಕಡೆಯವರು ಯಾರು ಬಂದಿರಲಿಲ್ಲ. ಈ ಬ್ರೋಕರ್ ಗಳು ಎಲ್ಲವನ್ನು ನೋಡಿಕೊಂಡರು. ಸೋಮಶೇಖರ ಕುಟುಂಬದವರೆಲ್ಲ ಇದ್ದರು. ಮದುವೆ ಆಗಿ ಒಂದು ವಾರ ಕಳೆಯುವಷ್ಟರಲ್ಲಿ ಅದು ಇದು ಎಂದು ಮಂಜುಳಾ ಕಿರಿಕಿರಿ ಶುರು ಮಾಡಿದ್ದಾಳೆ.
ಮದುವೆಯಾಗಿ ಒಂದು ತಿಂಗಳು ಮೂರು ದಿನದಲ್ಲಿ ಮನೆಯಲ್ಲಿ ಎಲ್ಲರೂ ಹೊಲದಲ್ಲಿ ಕೆಲಸಕ್ಕೆ ಹೋಗಿದ್ದಾಗ ಮಂಜುಳಾ ಮನೆ ತೊರೆದು ನೆಡೆದುಕೊಂಡು ಊರ ಹೊರಗಡೆ ಹೊರಟಿದ್ದಳಂತೆ. ಅಂದು ಹೇಗೋ ಮಾಡಿ ಅವಳನ್ನು ಮನೆಗೆ ಕರೆದುಕೊಂಡು ಬಂದು ಬ್ರೋಕರ್ ಗಳನ್ನು ಕರೆದು ಅವರಿಗೆ ಆಕೆಯನ್ನು ಒಪ್ಪಿಸಿದ್ದಾರೆ.
ಕೆಲ ದಿನಗಳ ಬಳಿಕ ಸೋಮಶೇಖರ ಶಿವಮೊಗ್ಗಕ್ಕೆ ಹೋದಾಗ ಎಲ್ಲ ಸತ್ಯ ಗೊತ್ತಾಗಿ ತನ್ನನ್ನು ಮದುವೆ ಹೆಸರಿನಲ್ಲಿ ವಂಚಿಸಿರುವುದು ಗೊತ್ತಾಗಿ ವಾಪಸ್ಸು ಬಂದಿದ್ದಾನೆ. ಬ್ರೋಕರ್ ಗಳಿಗೆ ತಾನು ಕೊಟ್ಟಿದ್ದ ಹಣ ವಾಪಸ್ಸು ನೀಡುವಂತೆ ಕೇಳಿದ್ದಾನೆ. ಅದಕ್ಕೆ ಸ್ಪಂದನೆ ಸಿಗದಿದ್ದಾಗ ಅಂತಿಮವಾಗಿ ಮುಧೋಳ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿರುವುದಾಗಿ ಸೋಮಶೇಖರ್ ನಡೆದ ಘಟನೆಯನ್ನು ವಿಜಯವಾಣಿಗೆ ತಿಳಿಸಿದ್ದಾನೆ.
ಸೋಮಶೇಖರ್ ಗೆ ಮದುವೆ ಮಾಡಿಸಿ ಮೋಸ ಮಾಡಿದ್ದ ಬ್ರೋಕರ್ ತಂಡಕ್ಕೆ ಮಂಜುಳಾ ವಿಚಾರ ತಿಳಿಸಿ, ತನಗೆ ಅನ್ಯಾಯ ಆಗಿದೆ ಎಂದು ಹೇಳಿದಾಗ, ಆರೋಪಿಗಳು, ಆಗಿದ್ದು ಆಯಿತು, ಈಗ ಇನ್ನೊಂದು ಮದುವೆ ಮಾಡಿಸುತ್ತೇವೆ ಎಂದು ಹೇಳಿ ಮತ್ತೊಬ್ಬ ಮಹಿಳೆಯನ್ನು ಸೂಚಿಸಿದ್ದರಂತೆ. ಅದಕ್ಕೆ ೫೫ ಸಾವಿರ ರೂ. ಕೊಡಿ ಎಂದು ಬೇಡಿಕೆ ಇಟ್ಟಿದ್ದರು. ಆದರೆ, ಈಗಾಗಲೇ ಮೋಸ ಹೋಗಿದ್ದ ನಾನು ಅದಕ್ಕೆ ಒಪ್ಪಲಿಲ್ಲ ಎನ್ನುತ್ತಾರೆ ಸೋಮಶೇಖರ್.
ಸೋಮಶೇಖರ್ ಜೊತೆ ಮದುವೆ ಮಾಡಿಸಿದ್ದ ಮಂಜುಳಾ ಗೆ ಮದುವೆ ಆದರೆ ೪ ತೊಲೆ ಚಿನ್ನ ಹಾಗೂ ಆಕೆ ಮಾಡಿಕೊಂಡಿದ್ದ ೬೦ ಸಾವಿರ ರೂ. ಸಾಲ ತೀರಿಸುವುದಾಗಿ ಈ ಬ್ರೋಕರ್ ಗಳು ಆಮಿಷ್ ನೀಡಿದ್ದರಂತೆ. ಆದರೆ, ಬರೀ ೪೦ ಸಾವಿರ ರೂ. ಅಷ್ಟೆ ಕೊಟ್ಟಿದ್ದು, ೪ ತೊಲೆ ಬಂಗಾರ ಕೊಟ್ಟಿಲ್ಲ ಎಂದು ಮಹಿಳೆ ತಾನು ಶಿವಮೊಗ್ಗಕ್ಕೆ ಹೋಗಿದ್ದಾಗ ಹೇಳಿದರೆಂದು ಸೋಮಶೇಖರ್ ಹೇಳುತ್ತಾರೆ.
ಇನ್ನು ಮೂರು ಎಕರೆ ಜಮೀನು ಹೊಂದಿರುವ ಸೋಮೇಖರ್, ಮದುವೆಗಾಗಿ ೫ ಲಕ್ಷ ರೂ. ಸಾಲ ಮಾಡಿದ್ದಾನೆ. ಈ ಮೊದಲು ೩ ಲಕ್ಷ ರೂ. ಸಾಲವೂ ಇತ್ತಂತೆ. ಹೀಗಾಗಿ ಒಂದು ಎಕರೆ ಜಮೀನು ಸಾಲಕ್ಕೆ ನೋಂದು ಮಾಡಿಸಿದ್ದು, ಇದೀಗ ಅದನ್ನು ಮಾರಬೇಕಾದ ಅನಿವಾರ್ಯತೆ ಬಂದಿದೆ. ಮದುವೆಗಾಗಿ ಸಾಲ ಮಾಡಿದೆ. ಹಣವೂ ಹೊಯಿತು, ಪತ್ನಿಯೂ ಇಲ್ಲ, ಜಮೀನು ಹೋಗುತ್ತಿದೆ. ನನ್ನ ಸ್ಥಿತಿ ಯಾರಿಗೂ ಬೇಡ. ಹೀಗಾಗಿ ಅಪರಿಚಿತ ಬ್ರೋಕರ್ ಗಳ ಬಗ್ಗೆ ಎಚ್ಚರ ವಹಿಸಬೇಕು ಎಂದು ರೈತ ಸೋಮಶೇಖರ್ ನೋವಿನಿಂದ ಹೇಳುತ್ತಾರೆ.
ಮದುವೆ ಹೆಸರಿನಲ್ಲಿ ಹಣ ವಸೂಲಿ ಮಾಡಿ, ಅದು ಈಗಾಗಲೇ ಮದುವೆ ಆಗಿದ್ದ ಮಹಿಳೆಯ ಜೊತೆ ಮದುವೆ ಮಾಡಿರುವ ಪ್ರಕರಣ ದಾಖಲಾಗಿರುವುದು ಜಿಲ್ಲೆಯಲ್ಲಿ ಇದೇ ಮೊದಲು. ಮದುವೆ ಹೆಸರಿನಲ್ಲೂ ಹೀಗೆ ಹಣ ವಸೂಲಿ ಮಾಡುವವರ ಬಗ್ಗೆ ಜನರು ಎಚ್ಚರ ವಹಿಸಬೇಕು. ಆರೋಪಿಗಳಿಗೆ ನೋಟಿಸ್ ನೀಡಿದ್ದು, ವಿಚಾರಣೆ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಎಸ್ಪಿ ಅಮರನಾಥ ರೆಡ್ಡಿ ತಿಳಿಸಿದ್ದಾರೆ.