ಬಾಗಲಕೋಟೆ: ನವನಗರದ ಸೆಕ್ಟರ ನಂ.೪೪ರಲ್ಲಿ ಭಜಂತ್ರಿ ಅವರ ಕುಟುಂಬದ ಮದುವೆ ಸಮಾರಂಭದಲ್ಲಿ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸಲಾಯಿತು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸೈರಾಬಾನು ನದಾಪ್ ನೇತೃತ್ವದ ತಂಡ ಸೆಕ್ಟರ ನಂ.೪೪ರಲ್ಲಿ ವಲ್ನೆರಬಲ್ ಮತಗಟ್ಟೆಗಳು ಇದ್ದುದರಿಂದ ಆ ಭಾಗದ ಜನರಲ್ಲಿ ಮುಕ್ತವಾಗಿ ಮತದಾನ ಮಾಡುವಂತೆ ಮಾಡುವ ದೃಷ್ಠಿಯಿಂದ ಆ ವ್ಯಾಪ್ತಿಯಲ್ಲಿ ನಡೆದ ಭಜಂತ್ರಿ ಕುಟುಂಬದ ಪರಶುರಾಮ ಮತ್ತು ಕಾವೇರಿ ವಧುವರರ ಮದುವೆ ಸಮಾರಂಭದ ವೇಳೆ ಮತದಾನ ಜಾಗೃತಿ ಮೂಡಿಸಲು ಮುಂದಾದರು.
ಈ ಸಂದರ್ಭದಲ್ಲಿ ಮಾತನಾಡಿದ ಸೈರಾಬಾನು ನದಾಪ್ ಅವರು ಬರುವ ಮೇ ೭ ರಂದು ನಡೆಯಲಿರುವ ಮತದಾನ ದಿನದಂದು ಯಾವುದೇ ಆಮಿಷಕ್ಕೆ ಒಳಗಾಗದೇ ನಿರ್ಭಿತಿಯಿಂದ ಮತ ಚಲಾಯಿಸಬೇಕು. ಉತ್ತಮ ನಾಗರಿಕನಾಗುವ ಜೊತೆಗೆ ಉತ್ತಮ ಮತದಾರರಾಗಬೇಕು. ವ್ಯಕ್ತಿಯ ಮನೋಬಲದ ಸರಿಯಾದ ಸದ್ಬಳಕೆಯನ್ನು ಮತದಾನದ ಮೂಲಕ ಸಾಬೀತು ಪಡೆಸಬೇಕಿದೆ. ಪ್ರತಿಯೊಬ್ಬರು ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು. ಮದುವೆ ಆಗಮಿಸಿದ ಜನರಿಗೆ ಮತದಾನದ ಪ್ರತಿಜ್ಞಾನಿಧಿ ಬೋಧಿಸಲಾಯಿತು.
ಈ ಸಂದರ್ಭದಲ್ಲಿ ವಸತಿ ನಿಲಯಗಳ ಮೇಲ್ವಿಚಾರಕರಾದ ಚದಾನಂದ ಚಿದಂಬರ, ಉಮೇಶ ಕುರಿಗಾರ, ಪ್ರವೀಣ ಕಂಬಾರ ಸೇರಿದಂತೆ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಇದ್ದರು